Today News ವಾಟ್ಸ್‌ಆ್ಯಪ್‌ ಹೊಸ ಫೀಚರ್ whattsapp


ವಾಟ್ಸ್‌ಆ್ಯಪ್‌ ಹೊಸ....
ವಾಟ್ಸ್‌ಆ್ಯಪ್‌ ಹೊಸ ಫೀಚರ್ whattsapp


ಡಾರ್ಕ್‌ ಮೋಡ್: ಕೆಲವೇ ತಿಂಗಳುಗಳಲ್ಲಿ ವಾಟ್ಸ್‌ಆ್ಯಪ್‌ನಲ್ಲಿಯೂ ಡಾರ್ಕ್‌ ಮೋಡ್‌ ಆಯ್ಕೆ ಬರಲಿದೆ. ಆಂಡ್ರಾಯ್ಡ್‌ 10 ಮತ್ತು ಐಒಎಸ್‌ 13 ಮೊಬೈಲ್‌ಗಳಲ್ಲಿ ಇದು ಬಳಕೆಗೆ ಬರಲಿದೆ. ಈಗಾಗಲೇ ಕೆಲವು ಬೀಟಾ ವರ್ಷನ್‌ಗಳಲ್ಲಿ ಡಾರ್ಕ್‌ ಮೋಡ್‌ ಸಕ್ರಿಯಗೊಳಿಸಲಾಗಿದೆ.

ಡಾರ್ಕ್‌ ಮೋಡ್‌ ವೈಶಿಷ್ಟ್ಯವನ್ನು ವಾಟ್ಸ್‌ಆ್ಯಪ್‌ ಡಾರ್ಕ್‌ ಥೀಮ್‌ ಎಂದು ಕರೆದಿದೆ. ಈ ಡಾರ್ಕ್‌ ಥೀಮ್‌ ಆ್ಯಪ್‌ನ ಬಣ್ಣವನ್ನು ಬ್ಲ್ಯೂ ನೈಟ್‌ ಬಣ್ಣಕ್ಕೆ ಬದಲಾಯಿಸಲಿದೆ. ಸಿಸ್ಟಂ ಡಿಫಾಲ್ಟ್‌ ಆಯ್ಕೆಯೂ ಇದ್ದು, ಥೀಮ್‌ ಅನ್ನು ಆಟೊಮೆಟಿಕ್‌ ಆಗಿ ಬದಲಾಯಿಸಲು ನೆರವಾಗುತ್ತದೆ. ಇದು ಕಣ್ಣಿಗೆ ಹಿತವಾಗಿದ್ದು, ಬ್ಯಾಟರಿ ಉಳಿಸಲೂ ನೆರವಾಗುತ್ತದೆ.

ಇನ್‌ಸ್ಟಾಗ್ರಾಂನಲ್ಲಿ ಇರುವ ಡಾರ್ಕ್‌ ಮೋಡ್‌ಗಿಂತ ತುಸು ಭಿನ್ನವಾಗಿರಲಿದೆ. ಇನ್‌ಸ್ಟಾಗ್ರಾಂನಲ್ಲಿ ಕಡು ಕಪ್ಪು ಬಣ್ಣ ಬಳಸಲಾಗಿದೆ, ಆದರೆ ವಾಟ್ಸ್‌ಆ್ಯಪ್‌ನಲ್ಲಿ ಕಪ್ಪು ಬಣ್ಣದ ಪ್ರಮಾಣ ಕಡಿಮೆ ಇದೆ.

ಮೆಸೇಜ್‌ ಮಾಯಾವಾಗಿಸಿ: ನೀವು ಕಳುಹಿಸುವ ಮೆಸೇಜ್‌ ಎಷ್ಟು ಸಮಯದವರೆಗೆ ಇರಬೇಕು ಎಂದು ನಿರ್ಧರಿಸುವ ಆಯ್ಕೆ ಲಭ್ಯವಾಗಲಿದೆ. ಉದಾಹರಣೆಗೆ ಒಂದು ಮೆಸೇಜ್‌ 5 ನಿಮಿಷ ಮಿತಿ ಇಟ್ಟರೆ, ಆ ಬಳಿಕ ಅದು ಮಾಯವಾಗಲಿದೆ. ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ವಾಟ್ಸ್‌ಆ್ಯಪ್‌ 5 ಸೆಕೆಂಡ್‌, 1 ಗಂಟೆ, 1 ದಿನ, 7 ದಿನ ಮತ್ತು 30 ದಿನಗಳ ಮಿತಿಯನ್ನು ನೀಡುವ ಸಾಧ್ಯತೆ ಇದೆ.

ಕಾಂಟ್ಯಾಕ್ಟ್‌ ರ್‍ಯಾಂಕಿಂಗ್‌: ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ಇರುವ ಎಲ್ಲರೊಂದಿಗೂ ಚಾಟ್‌ ಮಾಡುವುದಿಲ್ಲ. ಹೀಗಾಗಿ ಯಾರೊಂದಿಗೆ ಹೆಚ್ಚು ಚಾಟ್ ಮಾಡುತ್ತೇವೆ ಎನ್ನುವ ಆಧಾರದ ಮೇಲೆ ವಾಟ್ಸ್‌ಆ್ಯಪ್‌ನ ಕಾಂಟ್ಯಾಕ್ಟ್‌ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಇರುವಂತೆಯೇ ಮಾಡುವ ಆಯ್ಕೆ ಶೀಘ್ರವೇ ಲಭ್ಯವಾಗಲಿದೆ.
SHAYILAinfo..

Featured Post

ನಿದ್ದೆ ಎಂಬ ಮದ್ದು

ನಿದ್ದೆ ಎಂಬ ಮದ್ದು ‘ಹಗಲು ಎಚ್ಚರ, ರಾತ್ರಿ ಗಡದ್ದಾಗಿ ನಿದ್ದೆ ಮಾಡಿದರೆ ಕೊರೊನಾ ಸದ್ದಿರೋಲ್ವಂತೆ’ ಸುದ್ದಿಸಾರ ಹೇಳಿದೆ. ‘ಹಾಳಾದ್ದು, ಮಧ್ಯಾಹ್ನ ನಿದ್ದೆ ತಡೆಯ...

Popular Post