Showing posts with label Story. Show all posts
Showing posts with label Story. Show all posts

ನಿದ್ದೆ ಎಂಬ ಮದ್ದು

ನಿದ್ದೆ ಎಂಬ ಮದ್ದು

‘ಹಗಲು ಎಚ್ಚರ, ರಾತ್ರಿ ಗಡದ್ದಾಗಿ ನಿದ್ದೆ ಮಾಡಿದರೆ ಕೊರೊನಾ ಸದ್ದಿರೋಲ್ವಂತೆ’ ಸುದ್ದಿಸಾರ ಹೇಳಿದೆ.

‘ಹಾಳಾದ್ದು, ಮಧ್ಯಾಹ್ನ ನಿದ್ದೆ ತಡೆಯೋ
ಕ್ಕಾಗೋಲ್ಲ, ರಾತ್ರಿ ಕಣ್ಮುಚ್ಚಿದರೂ ನಿದ್ದೆ ಸುಳಿಯೋಲ್ಲ’ ಅತ್ತೆ ಗೊಣಗಿದರು.

‘ಒಂದು ತುತ್ತು ಊಟ ಕಡಿಮೆ ಮಾಡಿದರೆ ಕಣ್ಣೆಳೆಯಲ್ಲವೇನೋ’ ನನ್ನ ಪರ್ಮಿಷನ್ ಕೇಳದೆ ನಾಲಿಗೆ ಒದರಿತ್ತು.

‘ಕರೆಂಟು ರಾತ್ರಿಯತನಕ ಬರೋಲ್ವಂತೆ, ಇಡ್ಲಿಗೆ ನೆನೆಸಿದ್ದೀನಿ, ಒರಳು ತೊಳೆದಿಟ್ಟಿದ್ದೀನಿ’ ನನ್ನವಳ ಮಾತಿನ ಬಾಣ ನನ್ನತ್ತ ನೇರವಾಗಿ ಬಂದು ಬಿತ್ತು. ಪುಟ್ಟಿ, ಕಿಸಕ್ಕನೆ ನಕ್ಕಳು.

‘ನಿದ್ದೇನೇ ಒಳ್ಳೆಯ ಮದ್ದು, ಆದರೆ ಬೇಕು ಅಂದಾಗ ಬರೋಲ್ಲ... ಬೇಡವೆಂದಾಗ ಕಣ್ಣೆಳೆಯುತ್ತೆ. ಎಲ್ಲಕ್ಕೂ ಯೋಗ ಬೇಕು’ ಮತ್ತೆ ಸುದ್ದಿಯತ್ತ ಎಲ್ಲರ ಚಿತ್ತ ತಿರುಗಿಸಿದೆ.

‘ಅಪ್ಪಾ, ಆ ವಿಷಯಕ್ಕೆ ಬಂದರೆ ಕಂಠಿ ಅಂಕಲ್ ಯೋಗಿ ಅಲ್ವಾ?’ ಪುಟ್ಟಿಯ ಸಮಯೋಚಿತ ನೆನಕೆ.


‘ಹೌದು ಪುಟ್ಟಿ, ಭಲೇ ಅದೃಷ್ಟವಂತ ಅವನು, ನೆನೆದಾಗ ಕುಳಿತಲ್ಲೇ ತೂಕಡಿಸ್ತಾನೆ’ ಎಂದೆ.

‘ಅವರಲ್ಲಿ ನೀವು ಯಾಕೆ ಸಲಹೆ ಕೇಳಬಾರದು?’ ಅತ್ತೆಯ ಮನವಿ.

‘ಅದಕ್ಕೇನಂತೆ ಈಗ್ಲೇ ಮಾಡ್ತೀನಿ’ ಎಂದು ಅವನ ನಂಬರ್ ಒತ್ತಿದೆ. ಬಿಜಿ...ಬಿಜಿ
ನನ್ನವಳ ಮುಖ ಸಪ್ಪಗಾಯಿತು.

ಛಲಬಿಡದ ತ್ರಿವಿಕ್ರಮನಂತೆ ಪ್ರಯತ್ನಿಸಿದೆ. ಕೊನೆಗೂ ಲೈನಿಗೆ ಬಂದ.
‘ಹಗಲಲ್ಲಿ ನಿದ್ದೆ ಬಾರದಿರಲು ನಿಮಗಿಷ್ಟವಾದ ಸಿನಿಮಾನೋ ಸೀರಿಯಲ್ಲೋ ಒಂದರ ಹಿಂದೊಂದು ನೋಡುತ್ತಲೇ ಇರಿ, ನಿದ್ದೆಯಿಂದ ದೂರವಿರಿ. ರಾತ್ರಿ ನಿದ್ದೆಬರಲು ನಿಮಗೆ ಹಿಡಿಸದ ಪುಸ್ತಕದ ಮೇಲೆ ಕಣ್ಣಾಡಿಸಿ, ಕೆಲವೇ ಸೆಕೆಂಡುಗಳಲ್ಲಿ ಗೊರಕೆ ಹೊಡೆಯದಿದ್ದರೆ ಕೇಳಿ’ ಎಂದು ಆಕಳಿಸುತ್ತಾ ಕರೆ ಮುಗಿಸಿದ.

‘ಸಲಹೆ ಕೊಟ್ರಾ’ ನನ್ನವಳ ಕುತೂಹಲ. ‘ಹ್ಞೂಂ ಸುಲಭ, ಕಷ್ಟವೇನಲ್ಲ’ ಎಂದೆ.

‘ಕರೆಂಟ್ ಬಂದಾಗ ರುಬ್ಬಿಕೊಂಡರಾಯ್ತು, ನಿಧಾನವಾದಷ್ಟೂ ಚೆನ್ನಾಗಿ ನೆನೆದಿರುತ್ತೆ’ ಅತ್ತೆ ನನ್ನ ಪರ ನಿಂತರು.
-ಕೆ.ವಿ.ರಾಜಲಕ್ಷ್ಮಿ

ಗಂಡೋ ಹೆಣ್ಣೋ? ಹಾಸ್ಯ

ಗಂಡೋ ಹೆಣ್ಣೋ? ಹಾಸ್ಯ

ಕೊರೊನಾ ನಾಶಕ್ಕೆ ಶಕ್ತಿಯಂತ್ರ ಮಂತ್ರಿಸಿ ಕೊಡುವುದಾಗಿ ಗುರೂಜಿಯೊಬ್ಬರು ಜಾಹೀರಾತು ನೀಡಿದ್ದನ್ನು ನೋಡಿದ ತೆಪರೇಸಿ, ಅವರಿಗೆ ಫೋನ್ ಮಾಡಿದ. ‘ಗುರುಗಳೇ, ನೀವು ಕೊರೊನಾ ಬಂದೋರಿಗೆ ಯಂತ್ರ ಮಾಡಿ ಕೊಡ್ತೀರೋ ಅಥ್ವಾ ಅದು ಬರದಂಗೇ ಯಂತ್ರ ಮಾಡಿಕೊಡ್ತೀರೋ?’

‘ಎರಡಕ್ಕೂ ಮಾಡಿಕೊಡ್ತೀನಿ, ನಿಮಗೆ ಯಾವುದು ಬೇಕು?’

‘ಅಲ್ಲ, ಅದು ಮಹಾಮಾರಿ ವೈರಸ್ಸು, ನಿಮ್ಮ ಮಾತು ಕೇಳುತ್ತಾ ಅಂತ...’

‘ಎಂಥೆಂಥ ಭೂತ ಪ್ರೇತ ಪಿಶಾಚಿಗಳೆಲ್ಲ ನಮ್ಮ ಮಾತು ಕೇಳ್ತಾವೆ, ಜುಜುಬಿ ವೈರಸ್ ಕೇಳಲ್ವ?’

ಹೌದಾ? ಒಂದು ಪ್ರಶ್ನೆ ‘ಕೊರೊನಾ ಗಂಡೋ ಹೆಣ್ಣೋ?’ ಗುರೂಜಿ ತಡವರಿಸುತ್ತಾ ಕೇಳಿದರು ‘ಅದೆಲ್ಲ ಯಾಕೆ?’

‘ನೀವು ಯಂತ್ರ ಮಾಡಿಕೊಡುವಾಗ ಎಡವಟ್ಟಾಗಬಾರದು ನೋಡಿ. ಗಂಡು ಕೊರೊನಾಗೆ ಯಂತ್ರ ಮಾಡಿಕೊಡೋದು, ಆಮೇಲೆ ಹೆಣ್ಣು ಕೊರೊನಾ ಕಾಟ ಕೊಡೋದು ಮಾಡಿದ್ರೆ?’

‘ನನಗೆ ಗೊತ್ತಿಲ್ಲ, ನೀವೇ ಹೇಳಿ ನೋಡೋಣ’.

‘ನನ್ನ ಪ್ರಕಾರ ಕೊರೊನಾ ಹೆಣ್ಣು...’


‘ಹೆಣ್ಣಾ? ಅದೆಂಗೆ?’

‘ಕೊರೊನಾ ಸ್ತ್ರೀ ಪಕ್ಷಪಾತಿ, ಕೊರೊನಾದಿಂದ ಈಗ ಸತ್ತಿರೋರೆಲ್ಲ ಗಂಡಸರೇ’

‘ಆಯ್ತು, ಹೆಣ್ಣು ಕೊರೊನಾಗೆ ಮಂತ್ರಿಸಿ, ದಿಗ್ಬಂಧನ ಹಾಕಿ ನಿಮಗೆ ಗಟ್ಟಿಯಂತ್ರ ಮಾಡಿಕೊಟ್ರೆ ಆಯ್ತಲ್ಲ?’ ಗುರೂಜಿ ರಾಜಿಗೆ ಬಂದರು.

‘ಆಯ್ತು ಆದರೆ ಒಂದು ಕಂಡೀಶನ್. ನಿಮ್ಮ ಅಕೌಂಟಿಗೆ ನೀವು ಹೇಳಿದಷ್ಟು ಹಣ ಹಾಕ್ತೇನೆ. ನಿಮ್ಮಿಂದ ಒಂದು ಉಪಕಾರ ಆಗಬೇಕು...’

‘ಖಂಡಿತ ಮಾಡೋಣ ಹೇಳಿ’ ಗುರೂಜಿ ಖುಷಿಯಾದರು.

‘ಏನಿಲ್ಲ, ಯಂತ್ರ ಇಸ್ಕಳೋಕೆ ನಾನು ಹೊರಕ್ಕೆ
ಬಂದ್ರೆ ಪೊಲೀಸ್ರು ಒದೀತಾರೆ. ಹೆಂಗೂ ಕೊರೊನಾ ನಿಮಗೇನೂ ಮಾಡಲ್ಲ. ಒಂದು ಹೆಜ್ಜೆ
ನೀವೇ ನಿಮ್ಮ ಕಚೇರಿ ಪಕ್ಕಾನೇ ಇರೋ ಗೌರ್ಮೆಂಟ್ ಆಸ್ಪತ್ರೆ ಕೊರೊನಾ ವಾರ್ಡ್‌ಗೆ ಹೋಗಿ ನಮ್ಮ ಪೇಶಂಟ್ ಕೈಗೆ ಆ ಯಂತ್ರ ಕಟ್ಟಿ ಬರ್ತೀರಾ?
ಹಲೋ... ಹಲೋ...’ ಗುರೂಜಿ ಫೋನ್ ಕಟ್!
-ಬಿ.ಎನ್.ಮಲ್ಲೇಶ್

ಗಂಡಂದಿರ ಗುಟ್ಟು

ಗಂಡಂದಿರ ಗುಟ್ಟು



ಹೆಂಡ್ತಿಗೆ ಕೊಹ್ಲಿ ತಲೆ ಬಾಚಿದ್ದು, ರಾಧಿಕಾ ಪಂಡಿತ್ ಮನೆಕೆಲಸ ಮಾಡುವಾಗ ಯಶ್ ಮಕ್ಕಳನ್ನು ಆಟ ಆಡಿಸುವುದನ್ನು ಟಿ.ವಿ.ಯಲ್ಲಿ ತೋರಿಸಿದ್ರು, ನೀವು ನೋಡಲಿಲ್ವಾ?’

ಗಂಡಸರು ಮಾಸ್ಕ್ ಧರಿಸಿ, ಚೀಲ ಹಿಡಿದು ದಿನಸಿ ಅಂಗಡಿ ಎದುರು ಅಂತರ ಕಾಪಾಡಿಕೊಂಡು ಸಾಲುಗಟ್ಟಿದ್ದರು. ‘ಯಾಕೆ ಸಾರ್, ನಿಮ್ಮ ಸೊಂಟ ಹಿಡುಕೊಂಡಿದ್ದೀರಿ?’ ಒಬ್ಬರನ್ನು ಕೇಳಿದೆ.
‘ಮೆಡಿಕಲ್ ಸ್ಟೋರಿಗೆ ಹೋಗುತ್ತಿದ್ದಾಗ ಪೊಲೀಸರು ಬಾರಿಸಿಬಿಟ್ಟರು’ ಮುಲುಕಾಡಿದರು.
‘ಬರೆ ಬರುವಂತೆ ನಿಮ್ಮ ಕಾಲ ಮೇಲೆ ಬಾರಿಸಿದ್ದಾರೆ ಪೊಲೀಸರು, ಛೇ...’ ಇನ್ನೊಬ್ಬರಿಗೆ ಕೇಳಿದೆ. ಆತ ಗಾಬರಿಯಾಗಿ, ಮೇಲಕ್ಕೆ ಕಟ್ಟಿದ್ದ ಪಂಚೆಯನ್ನು ಕೆಳಕ್ಕೆ ಬಿಟ್ಟು ಮುಚ್ಚಿಕೊಂಡು, ‘ಹೆಹ್ಹೆಹ್ಹೆ... ಮೊನ್ನೆ ಫ್ರೆಂಡ್ ಮನೆಗೆ ಹೋಗಿಬರುವಾಗ ಪೊಲೀಸರು ಓಡಿಸಿಕೊಂಡು ಬಂದು ಹೊಡೆದರು’ ಎಂದು ಹೇಳಿ, ಸಾಮಾನು ಖರೀದಿಸಿ, ನಿಲ್ಲದೆ ಹೊರಟರು.
‘ಪಾಪ...! ಯಾಕೆ ಪೊಲೀಸರು ಗಂಡಸರನ್ನೇ ಹುಡುಕಿ ಲಾಠಿ ಬೀಸಿದ್ದಾರೆ?’ ಅಂಗಡಿಯವ
ನನ್ನು ಕೇಳಿದೆ. ‘ಲಾಠಿ ಏಟು ಅಲ್ಲ ಸಾರ್, ಸೌಟು, ಲಟ್ಟಣಿಗೆ ಏಟು. ಮುಖ-ಮೂತಿಯೂ ಊದಿಕೊಂಡಿದೆ, ಮಾಸ್ಕ್ ಹಾಕಿದ್ದರಿಂದ ನಿಮಗೆ ಕಾಣಿಸಿಲ್ಲ’ ಅಂದ.
‘ಪೊಲೀಸರು ಲಾಠಿ ಬಿಟ್ಟು ಸೌಟು, ಲಟ್ಟಣಿಗೆ ಹಿಡಿದು ಡ್ಯೂಟಿ ಮಾಡ್ತಾರಾ?’

‘ಶಿಲ್ಪಾ ಶೆಟ್ಟಿ ಕಸ ಗುಡಿಸಿದ್ದು, ಕತ್ರಿನಾ ಕೈಫ್ ಪಾತ್ರೆ ತೊಳೆದದ್ದು, ದೀಪಿಕಾ ಪಡುಕೋಣೆ ಅಡುಗೆ ಮಾಡುವಾಗ ಗಂಡ ತರಕಾರಿ ಹೆಚ್ಚಿಕೊಟ್ಟಿದ್ದು, ವಿರಾಟ್ ಕೊಹ್ಲಿಗೆ ಅನುಷ್ಕಾ ಹೇರ್ ಕಟಿಂಗ್ ಮಾಡಿದ್ದು, ಹೆಂಡ್ತಿಗೆ ಕೊಹ್ಲಿ ತಲೆ ಬಾಚಿದ್ದು, ರಾಧಿಕಾ ಪಂಡಿತ್ ಮನೆಕೆಲಸ ಮಾಡುವಾಗ ಯಶ್ ಮಕ್ಕಳನ್ನು ಆಟ ಆಡಿಸುವುದನ್ನು ಟಿ.ವಿ.ಯಲ್ಲಿ ತೋರಿಸಿದ್ರು, ನೀವು ನೋಡಲಿಲ್ವಾ?’
‘ನೋಡಿದೆ, ಸೆಲೆಬ್ರಿಟಿ ದಂಪತಿ ಕೊರೊನಾ ರಜೆಯಲ್ಲಿ ಒಬ್ಬರಿಗೊಬ್ಬರು ಹೆಲ್ಪ್ ಮಾಡಿಕೊಂಡಿದ್ದಾರೆ, ಆದರ್ಶ ದಂಪತಿ ಅವರು’.
‘ಹೌದಲ್ವಾ? ಅಂಥಾ ಸೆಲೆಬ್ರಿಟಿ ಗಂಡಂದಿರೇ ಹೆಂಡ್ತಿಯರಿಗೆ ಸಹಾಯ ಮಾಡುವಾಗ, ಈ ಗಂಡಂದಿರು ಮನೆಯಲ್ಲಿ ಬರೀ ಉಂಡುಕೊಂ ಡಿದ್ದರೆ ಯಾವ ಹೆಂಡ್ತಿ ತಾನೇ ಸಹಿಸಿಕೊಳ್ತಾಳೆ. ಸೌಟು, ಲಟ್ಟಣಿಗೆ ತಗೊಂಡು ಬ್ಯಾಟಿಂಗ್ ಆಡಿದ್ದಾರೆ. ಪೊಲೀಸರ ಲಾಠಿ ಏಟು ಅಂತ ಹೇಳಿಕೊಂಡು ಈ ಗಂಡಂದಿರು ಮರ್ಯಾದೆ ಕಾಪಾಡಿಕೊಳ್ತಿದ್ದಾರೆ ಅಷ್ಟೆ...’ ಎಂದು ಅಂಗಡಿಯವನು ನಕ್ಕ.
-ಮಣ್ಣೆ ರಾಜು

ಅಮ್ಮನಂತ ಪ್ರೀತಿ, ಅಮ್ಮನ ರೀತಿ Mother love

ಕನ್ನಡ ಕತೆಗಳು..

ಅವಳಿಗೆ ಅವನು ‘ಗ್ರೇಸಿ’ ಎಂದು ಹೆಸರಿಟ್ಟ. ಮನೆಗೆ ಕರೆತಂದವನೇ ಸ್ನಾನಮಾಡಿಸಿದ. ಅಂದಿನಿಂದ ಅವಳನ್ನು ತನ್ನೊಂದಿಗೆ ಮಲಗಿಸಿಕೊಳ್ಳಲು ಪ್ರಾರಂಭಿಸಿದ, ತಾಯಿಯ ಹಾಗೆ ಜೋಪಾನ ಮಾಡಿ ನೋಡಿಕೊಂಡ ದುರದೃಷ್ಟವಶಾತ್ ಅವಳ ಎಡಗಣ್ಣಿನ ಊತ ಉಲ್ಬಣಿಸಿ ಆ ಗಡ್ಡೆಯನ್ನು ತೆಗೆಯದೆ ಬೇರೆ ವಿಧಿಯೇ ಇರಲಿಲ್ಲ.

ನಟೋರಿಯಸ್ ಆಗಿದ್ದ ಅವನು ಸಂಪೂರ್ಣ ಬದಲಾದ ಕಾಲದಲ್ಲಿ ಸಮಾಜ ಸೇವೆಯತ್ತ ನನ್ನ ಚಿತ್ತ ಹೊರಳುವಂತೆ ಮಾಡಿದ್ದು ಹಾಲುಗಲ್ಲದ ಆ ಒಂದು ನಿಷ್ಕಲ್ಮಶ ನಗು. ಅದೊಂದು ದಿನ, ಅನಾಥ ಮಗುವೊಂದು ರಸ್ತೆಬದಿಯ ಚರಂಡಿಯಲ್ಲಿ ಬಿದ್ದಿದೆ ಎಂಬ ಸುದ್ದಿ ಅವನ ಪೇಜರ್‌ಗೆ ಬಂತು. ಅವಸರದಿಂದ ಬೈಕ್ ಏರಿ ಹೊರಟೇಬಿಟ್ಟೆ. ಅಲ್ಲಿ ಕಣ್ಣಿಗೆ ಬಿದ್ದದ್ದು ಒಂದು ಅನಾಥ ಹೆಣ್ಣುಮಗು. ಮಾಸಿದ, ಹರಿದ ಬಟ್ಟೆ ಅದರ ಮೇಲಿತ್ತು. ಅವಳ ಎಡಗಣ್ಣು ಎಷ್ಟರಮಟ್ಟಿಗೆ ಊದಿಕೊಂಡಿತ್ತೆಂದರೆ ರೆಪ್ಪೆಯನ್ನು ಮುಚ್ಚಲೂ ಆಗುತ್ತಿರಲಿಲ್ಲ. ಅವಳ ಚರ್ಮಕ್ಕೆಲ್ಲ ಸೋಂಕು ತಗುಲಿತ್ತು. ನೋವಿನಿಂದ ಮಗು ನರಳುತ್ತಿತ್ತು. ಅಲ್ಲಿ ಸೇರಿದ್ದ ಯಾರೊಬ್ಬರೂ ಸಹಾಯ ಮಾಡಲು ಮುಂದೆ ಬರಲಿಲ್ಲ. ಹಳೆಯದೊಂದು ಸೀರೆಯಲ್ಲಿ ಅವಳನ್ನು ಸುತ್ತಿ ಎದೆಗೆ ಕಟ್ಟಿಕೊಂಡು ಬೈಕ್ ಏರಿ ಹೊರಟೆ ಬಿಟ್ಟ.
ಸ್ವಲ್ಪ ಸಮಯದ ನಂತರ ಅವಳಿಂದ ಯಾವುದೇ ಧ್ವನಿ ಬಾರದಿದ್ದಾಗ ಗಾಡಿ ನಿಲ್ಲಿಸಿ ಸೀರೆಯ ಜೋಳಿಗೆಯೊಳಗೆ ಇಣುಕಿ ನೋಡಿದಾಗ ಅವನಿಗೆ ಅಚ್ಚರಿ ಕಾದಿತ್ತು. ಅವಳ ಬೊಚ್ಚು ಬಾಯಿಯಲ್ಲಿ ನಿಷ್ಕಲ್ಮಶ ನಗು. ಅದನ್ನು ಕಂಡಾಗ ಅವನಿಗೂ ಈ ಹಸುಳೆಗೂ ಯಾವಜನ್ಮದ ನಂಟೋ ಎಂದೆನಿಸದೇ ಇರಲಿಲ್ಲ. ಅವಳಿಗೆ ಅವನು ‘ಗ್ರೇಸಿ’ ಎಂದು ಹೆಸರಿಟ್ಟ. ಮನೆಗೆ ಕರೆತಂದವನೇ ಸ್ನಾನಮಾಡಿಸಿದ. ಅಂದಿನಿಂದ ಅವಳನ್ನು ತನ್ನೊಂದಿಗೆ ಮಲಗಿಸಿಕೊಳ್ಳಲು ಪ್ರಾರಂಭಿಸಿದ, ತಾಯಿಯ ಹಾಗೆ ಜೋಪಾನ ಮಾಡಿ ನೋಡಿಕೊಂಡ ದುರದೃಷ್ಟವಶಾತ್ ಅವಳ ಎಡಗಣ್ಣಿನ ಊತ ಉಲ್ಬಣಿಸಿ ಆ ಗಡ್ಡೆಯನ್ನು ತೆಗೆಯದೆ ಬೇರೆ ವಿಧಿಯೇ ಇರಲಿಲ್ಲ. ಮತ್ತೊಂದು ಕಣ್ಣಿನ ದೃಷ್ಟಿಯೂ ಅರ್ಧಕ್ಕೆ ಸೀಮಿತಗೊಂಡಿತು. ಅವಳ ಕುಟುಂಬವನ್ನು ಪತ್ತೆಹಚ್ಚಲು ಮಾಡಿದ ಯತ್ನಗಳೂ ಫಲ ನೀಡಲಿಲ್ಲ. ಆ ಸಮಯದಲ್ಲಿ ತನ್ನಲ್ಲಿ ಹಣದ ಕೊರತೆ ಇತ್ತಾದರೂ, ಆಕೆಯನ್ನು ಬಿಟ್ಟುಕೊಡಲು ಅವನು ಸಿದ್ಧನಿರಲಿಲ್ಲ.
ಅವನಿಗೆ ಅದಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಅವನ ಹೆಂಡತಿ ಗ್ರೇಸಿಯ ಸನಿಹಕ್ಕೂ ಹೋಗುತ್ತಿರಲಿಲ್ಲ. ಮೇಲಾಗಿ ಗಂಭೀರ ಆರೋಪವೊಂದನ್ನೂ ಹೊರಿಸಿದ್ದಳು. ನಿನ್ನ ಅಕ್ರಮ ಸಂಬಂಧದಿಂದ ಆ ಮಗು ಹುಟ್ಟಿದೆ ಎಂಬುದು ಆಕೆಯ ದೂರು. ಈ ಕಾರಣವಾಗಿ ಮನೆಯಲ್ಲಿ ರಂಪಾಟವೇ ನಡೆದರೂ,  ಗ್ರೇಸಿಯನ್ನು ತ್ಯಜಿಸಲಿಲ್ಲ. ದಿನಗಳೆದಂತೆ ಗ್ರೇಸಿ ಮೋಡಿಗೆ ಆಕೆ ಒಳಗಾದಳು. ಈಗ, ಇಬ್ಬರೂ ಒಳ್ಳೆಯ ಗೆಳತಿಯ
ರಾಗಿದ್ದಾರೆ. ಎಲ್ಲ ಮಕ್ಕಳಂತೆ ಆಕೆಯ ಮೊದಲ ನುಡಿ ‘ಅಮ್ಮ’ ಆಗಿರಲಿಲ್ಲ. ಆಕೆ ಹೇಳಿದ್ದೇ ‘ದಾದಾ’ ಎಂದು. 
ತಮಗಿಂತ ಗ್ರೇಸಿ ಬಗೆಗೇ ಹೆಚ್ಚು ಪ್ರೀತಿ ಎಂಬುದು ಅವನ ಮಕ್ಕಳ ಆರೋಪ. ನನ್ನ ಮಕ್ಕಳಿಗೆ ಅಮ್ಮ ಇದ್ದಳು. ಆದರೆ ಗ್ರೇಸಿಗೆ ಇದ್ದಿದ್ದು ನಾನು ಮಾತ್ರ. ಎಲ್ಲ ತಂದೆಯರಂತೆ ಆಕೆಯ ಭವಿಷ್ಯದ ಬಗ್ಗೆ ನನಗೆ ಚಿಂತೆಯಿತ್ತು. ಕನ್ನಡ ಮಾಧ್ಯಮದಲ್ಲಿ 9ನೇ ತರಗತಿವರೆಗೆ ಓದಿದ ಆಕೆ ಈಗ ನನ್ನದೇ ಎನ್‌ಜಿಒನಲ್ಲಿ 60 ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾಳೆ. ತುಂಟ ಹುಡುಗಿಯಾದರೂ ಸೂಕ್ಷ್ಮ ಮನಸ್ಸಿನವಳು. ಈ ಹಂತಕ್ಕೆ ಬೆಳೆದಿದ್ದರ ಬಗ್ಗೆ ನನಗೆ ಹೆಮ್ಮೆಯಿದೆ. ಆಕೆ ಇಲ್ಲದ ಬದುಕನ್ನು ಕಲ್ಪಿಸಿಕೊಳ್ಳುವುದು ನನಗೆ ಕಷ್ಟ.

ಕಾನೂನು ರೀತಿ ಆಕೆಯನ್ನು ನಾನು ದತ್ತು ಪಡೆದಿಲ್ಲ. ಆದರೆ ಪ್ರೀತಿಗೆ ಕಾಗಗದ ಪುರಾವೆ ಅಗತ್ಯವಿಲ್ಲ, ಡಿಎನ್‌ಎಯ ನಂಟೂ ಬೇಕಿಲ್ಲ. ಅಲ್ಲವೇ...

Featured Post

ನಿದ್ದೆ ಎಂಬ ಮದ್ದು

ನಿದ್ದೆ ಎಂಬ ಮದ್ದು ‘ಹಗಲು ಎಚ್ಚರ, ರಾತ್ರಿ ಗಡದ್ದಾಗಿ ನಿದ್ದೆ ಮಾಡಿದರೆ ಕೊರೊನಾ ಸದ್ದಿರೋಲ್ವಂತೆ’ ಸುದ್ದಿಸಾರ ಹೇಳಿದೆ. ‘ಹಾಳಾದ್ದು, ಮಧ್ಯಾಹ್ನ ನಿದ್ದೆ ತಡೆಯ...

Popular Post