SHAYILAinfo ಆ್ಯಪ್ ಡಿಲೀಟ್ ಮಾಡಲು ಏನು ಮಾಡಬೇಕು? What to do to delete the app?


ಆ್ಯಪ್ ಡಿಲೀಟ್ ಮಾಡಲು ಹೀಗೆ ಮಾಡಿ

ಮೊಬೈಲ್‌ನಲ್ಲಿ ಕೆಲವೊಂದು ಆ್ಯಪ್‌ಗಳನ್ನು ಬಳಸಿ ಆಮೇಲೆ ಅದು ಬೇಡ ಎನಿಸಿದಾಗ ಅಥವಾ ಮೊಬೈಲ್‌‌ನಲ್ಲಿ ಜಾಗ ಕಡಿಮೆ ಎಂಬ ಮೆಸೇಜ್ ತೋರಿಸಿದಾಗ ಅನಗತ್ಯ ಆ್ಯಪ್‌ಗಳನ್ನುನಾವು ಡಿಲೀಟ್ ಮಾಡುತ್ತೇವೆ.
ಹೀಗೆ ಆ್ಯಪ್‌ಗಳನ್ನು ಡಿಲೀಟ್ ಮಾಡುವುದಕ್ಕೆ ನಾವು ಬಳಸುವ ಸುಲಭ ವಿಧಾನ ಎಂದರೆ ಸ್ಕ್ರೀನ್ ಮೇಲೆ ಆ್ಯಪ್ ಐಕಾನ್ ಒತ್ತಿ ಹಿಡಿದು ಹೋಮ್ ಸ್ಕ್ರೀನ್‌ಗೆ ತಂದು ಅನ್‌ಇನ್‌ಸ್ಟಾಲ್ ಮಾಡುವುದು ಒಂದು ವಿಧಾನ.

ಇದಲ್ಲದೆ ಸೆಟ್ಟಿಂಗ್ಸ್‌ಗೆ ಕ್ಲಿಕ್ ಮಾಡಿ ಅಲ್ಲಿ Application manager ಕ್ಲಿಕ್ ಮಾಡಿ ನಿರ್ದಿಷ್ಟ ಆ್ಯಪ್‌ನ್ನು ಡಿಲೀಟ್ ಮಾಡುವುದು ಇನ್ನೊಂದು ವಿಧಾನ.

ಈ ರೀತಿ ಆ್ಯಪ್ ಡಿಲೀಟ್ ಮಾಡುವ ಮುನ್ನ ಆ ಆ್ಯಪ್‌ನ Data ಮತ್ತು cache ಕ್ಲಿಯರ್ ಮಾಡಿ. ಆ್ಯಪ್ ಡೇಟಾ ಮತ್ತು cache ಕ್ಲಿಯರ್ ಮಾಡುವುದಕ್ಕಾಗಿ ಆ್ಯಪ್ ಸೆಟ್ಟಿಂಗ್ಸ್ ತೆರೆದು ಅಲ್ಲಿ ನೀವು ಅನ್‌ಇನ್‌ಸ್ಟಾಲ್ ಮಾಡಲಿಚ್ಛಿಸುವ ಆ್ಯಪ್ ಕ್ಲಿಕ್ ಮಾಡಿ. ಅಲ್ಲಿ ಸ್ಟೋರೇಜ್ ಕ್ಲಿಕ್ ಮಾಡಿದರೆ ಕೆಳಗೆ Clear data ಮತ್ತು Clear cache ಎಂದಿರುತ್ತದೆ. ಇವೆರಡನ್ನು ಕ್ಲಿಕ್ ಮಾಡಿ ಕ್ಲಿಯರ್ ಮಾಡಿದ ನಂತರ ಆ್ಯಪ್ ಅನ್‌ಇನ್‌ಸ್ಟಾಲ್ ಮಾಡಿ. ಈಗ ನೀವು ಅನ್‌ಇನ್‌ಸ್ಟಾಲ್ ಮಾಡಿರುವ ನಿರ್ದಿಷ್ಟ ಆ್ಯಪ್‌ಗೆ ಸಂಬಂಧಿಸಿದ ಯಾವುದೇ ಫೈಲ್‌ಗಳು ನಿಮ್ಮ ಮೊಬೈಲ್‌ನಲ್ಲಿ ಉಳಿಯಲಾರವು.

ಈ ರೀತಿ ಅನ್‌ಇನ್‌ಸ್ಟಾಲ್ ಮಾಡಿದ ಆ್ಯಪ್‌ಗೆ ಸಂಬಂಧಪಟ್ಟ ಎಲ್ಲ ಡೇಟಾವನ್ನು ತೆಗೆದುಹಾಕಬೇಕು ಎಂದು ಬಯಸಿದರೆ SD Maid (ಅಂಡ್ರಾಯ್ಡ್) ಆ್ಯಪ್ ಬಳಸಬಹುದು.

SDMaid ಬಳಕೆ ಹೀಗೆ

 ಗೂಗಲ್ ಪ್ಲೇ‌ಸ್ಟೋರ್‌ನಿಂದ SDMaid ಆ್ಯಪ್ ಇನ್‌ಸ್ಟಾಲ್ ಮಾಡಿ.

 ಆ್ಯಪ್ ಓಪನ್ ಮಾಡಿ Corpse Finder ಕ್ಲಿಕ್ಕಿಸಿ.

ಇದು ಕ್ಲಿಕ್ ಮಾಡಿದ ಕೂಡಲೇ ನೀವು ಅನ್‌ಇನ್‌ಸ್ಟಾಲ್ ಮಾಡಿರುವ ಆ್ಯಪ್‌ಗೆ ಸಂಬಂಧಪಟ್ಟ ಫೈಲ್‌ಗಳು ಇವೆಯೇ ಎಂಬುದನ್ನು ಇದು ಹುಡುಕುತ್ತದೆ. ಆ್ಯಪ್ ಅನ್‌ಇನ್‌ಸ್ಟಾಲ್ ಮಾಡಿಯೂ ಆ್ಯಪ್‌ಗೆ ಸಂಬಂಧಪಟ್ಟ ಫೈಲ್‌ಗಳು ಇನ್ನೂ ನಿಮ್ಮ ಮೊಬೈಲ್‌ನಲ್ಲಿ ಉಳಿದುಕೊಂಡಿದ್ದರೆ ಅವುಗಳ ಪಟ್ಟಿ ಡಿಸ್‌ಪ್ಲೇ ಆಗುತ್ತದೆ. ಅದನ್ನು ನೀವು ಡಿಲೀಟ್ ಮಾಡಬಹುದು.
SHAYILAinfo..

Featured Post

ನಿದ್ದೆ ಎಂಬ ಮದ್ದು

ನಿದ್ದೆ ಎಂಬ ಮದ್ದು ‘ಹಗಲು ಎಚ್ಚರ, ರಾತ್ರಿ ಗಡದ್ದಾಗಿ ನಿದ್ದೆ ಮಾಡಿದರೆ ಕೊರೊನಾ ಸದ್ದಿರೋಲ್ವಂತೆ’ ಸುದ್ದಿಸಾರ ಹೇಳಿದೆ. ‘ಹಾಳಾದ್ದು, ಮಧ್ಯಾಹ್ನ ನಿದ್ದೆ ತಡೆಯ...

Popular Post