Showing posts with label Kavithe master. Show all posts
Showing posts with label Kavithe master. Show all posts

ಕವನ Kavana

1)
ಮಳೆ ನಿಂತರೂ
ಎಲೆಯ ಮೇಲಿನ
ಹನಿ ಜಾರಲಿಲ್ಲ.
ಅಪರೂಪಕೆ ಭೇಟಿಯಾದ
ನೆನಪಿನ ಸ್ನೇಹ ಇರಬೇಕೆನೊ? Prasad..

2)
ಎಂದೊ ಶುರುವಾದ ಧಾರಾವಾಹಿಗಳು
ಪೂರ್ಣ ಮುಗಿದಿಲ್ಲವಾದರೂ
ಸದ್ಯ ..ತೆರೆ ಎಳೆಯುವ ಸಂಭವ ಬಂದಿದೆ.
ಕಂಡಕಂಡವರ ಮನೆ ಕತೆ ಹೇಳುತ್ತಿದ್ದ ಕಾಲ
ಹೇಳದ ಕೇಳದೆ ಹೋರಟು ಹೋಗಿದೆ.
ಬದಲಾಗುತ್ತಿರುವ ಇಂದಿನ ಕಾಲ ಘಟ್ಟದಲಿ
ಧಾರವಾಹಿ ಕತೆಗಳು ಬಾಯಿ ಮಾತಾಗಿ ಹೊರ ಬರುತಿದೆ
ಅಂದಿದ್ದ ಕಾಲವು ಇಂದಿಲ್ಲವಾದರು
ಕೊರೊನಾದಿಂದಾಗಿ ಮತ್ತೆ ಪುನ್ಹ ಬಂದಂತಿದೆ.Prasad..😊

Kannada Kavana


Kannada Kavana

ಮೈ ನೆನೆಯುತ್ತಿದ್ದರೂ....ಕಾಲು ತುಸು ಒದ್ದೆಯಾಯಿತ್ತಲ್ಲ ಅನ್ನೊ ಈ ಹುಡುಗಿಯ ಚಿಂತೆ. ಯಾರಿಗೊತ್ತು? ಆ ಮೊದಲ ಮಳೆ ಹನಿಗು ಸಂಭ್ರಮ ಒಂದು ಹೆಣ್ಣಿನ ಪಾದ ಸ್ಪರ್ಶಿಸಲು. Prasad..😘

ಕನ್ನಡ ಕವನಗಳು (ಕವಿತೆ ಮಾಸ್ಟರ್)

(  ಛತ್ರಿ 1)
-----------------
 ನಿನ್ನ ನೆನಪು
ಮತ್ತೆ ಶುರುವಾಗುತಿದೆ
ಎಂದೊ ಬದಿಗೆತ್ತಿ
ಇಟ್ಟ ನೆನಪು
ಮತ್ತೆ ಕಾಡತೊಡಗಿದೆ
ಬಿರು ಬಿಸಿಲಲು
ಬಿಡಿಸಿ ನೋಡದ
ನಿನ್ನ  ಮುಖವನು
ಇಂದು ತೆರೆದು
ನೋಡುವ ಹಾಗೆ ಮಾಡಿದೆ|

(  ಛತ್ರಿ 2)
-----------------
  ಅಂದೊಂದು
ಮೋಡದ ಮರೆಯಿಂದ
ಜಾರಿದ ಮಳೆ ಹನಿ
ನನ್ನ ಮೈ ಸೋಕಿದಾಗ
ನಿನ್ನನ್ನು ಬಿಟ್ಟು ಬಂದೆನಲ್ಲ
ಎಂಬ ಕೊರಗು ಕಾಡಿತು| 

(ಕೊಡೆ ಹಿಡಿಯುವ ಜೊತೆಗಾತಿ)
------------------------------------
  ನೀ ನು  ಇದ್ದರೆ ನನ್ನ ಕಾಯುತ್ತಿದ್ದೆ
ಇರಬೇಕು ನೀನು ನನ್ನ ಜೊತೆ
ಮಳೆಗಾಲದಲಿ ನನ್ನ ಬಿಟ್ಟು ಇರಲಾರದಂತೆ|

(ಬಾಲ್ಯದ ಮಳೆ)
----------------------
ಅದೊಂದು ನೀರಾಟ ಮಳೆ ಸೋಕುವ ಭಯವು ಇರಲಿಲ್ಲ. ಆವಾಗ ನನಗೆ ನಾನೆ ರಾಜ, ನನಗೆ ನಾನೆ ರಕ್ಷಕ.Prasad....

Kavanagalu ಹನಿ ಜನಿ




ಲೈಫಲ್ಲಿ ಝೀರೊ ಆದ್ರೆ
ಏನಂತೆ ಚಿನ್ನಾ..??
ಪ್ರೀತಿಲಿ ನಾನು
ನಿನ್ನ ಹೀರೊನೇ..
SHAYILAinfo..

ಹನಿ ಜನಿ, The cage parrot ಪಂಜರದ ಗಿಳಿ


The cage parrot

ಅಂದದ
ಅರಮನೆಯ 
ಗಿಳಿಗೆ
ಚಿನ್ನದ 
ಪಂಜರ 
ಇದ್ದೇನು ಸುಖ?
SHAYILAinfo..

Kavanagalu ಹನಿ ಜನಿ

Kavanagalu ಹನಿ ಜನಿ

ಸತ್ಯಕೆ
ಬೆಲೆಯಿಲ್ಲದ
ಕಾಲ
ನಿತ್ಯವು ನರಕವಾಯಿತು.
SHAYILAinfo..

Kavanagalu ಹನಿ ಜನಿ

Kavanagalu ಹನಿ ಜನಿ

ಮನೆಯಂಗಳದ ದಾರಿಲಿ
ಸಾಗುವ ಅರಸಿ ನೀ..
ನೀ.....ಬಂದರೆ
ಮನದ ಬಾಗಿಲು ತೆರೆದು
ಶ್ರೀಮತಿ ಅನ್ನುವೆ.
SHAYILAinfo..

ಹನಿ ಜನಿ

ಹನಿ ಜನಿ


ಮಾತು
ತಪ್ಪಾದರೇನು...?
....
ಅದ ಒಪ್ಪ ಹಾಕಿ
ಮತ್ತೆ ಧರಿಸು
ನೀನು.
SHAYILAinfo..

ಹನಿ ಜನಿ


ಚಿಗುರೆಲೆಗೆ ತಿಳಿದಿಲ್ಲ
ನಾಳೆ ತನ್ನ ಸರದಿ
ಎಂದು....
ಹಸಿರೆಲೆಗೆ ತಿಳಿದರೂ
ಗಹಗಹಿಸಿ ನಗುತಿದೆ...!!
SHAYILAinfo..

ಹನಿ ಜನಿ

ಎಲೆಯ ಮೇಲಿನ
ಇಬ್ಬನಿಗೆ
ಜಾರಿ ಹೋಗುವೆನೆಂದು
ಗೊತ್ತಿದ್ದರು.


ಅದು ಹೊಳೆಯುತಿತ್ತು..!!
SHAYILAinfo..

ಹನಿ ಜನಿ

ಎಲೆಯ ಮೇಲಿನ
ಇಬ್ಬನಿಗೆ
ಜಾರಿ ಹೋಗುವೆನೆಂದು
ಗೊತ್ತಿದ್ದರು.


ಅದು ಹೊಳೆಯುತಿತ್ತು..!!

ಹನಿ ಜನಿ

ಎಂದೊ ಕಂಡ ಕನಸು
ಇಂದು ನನಸಾಗುವ ಹಾಗಿದೆ.
.
.
.

ಅದು
ನೀನು ಬಂದಾಗ...!!
SHAYILAinfo..

ಇಬ್ಬನಿ

ನಿಮಗಿಬ್ಬರಿಗು ನಾ ಕೊಡಲಿಲ್ಲ
ನನ್ನ ವಿಳಾಸ.

ಹನಿ ಜನಿ

ಇಲ್ಲಿ ಯಾರಿಗು
ಯಾರು ಇಲ್ಲ....
ನಮಗೆ ನಾವೆ
ಎಲ್ಲ....||

Featured Post

ನಿದ್ದೆ ಎಂಬ ಮದ್ದು

ನಿದ್ದೆ ಎಂಬ ಮದ್ದು ‘ಹಗಲು ಎಚ್ಚರ, ರಾತ್ರಿ ಗಡದ್ದಾಗಿ ನಿದ್ದೆ ಮಾಡಿದರೆ ಕೊರೊನಾ ಸದ್ದಿರೋಲ್ವಂತೆ’ ಸುದ್ದಿಸಾರ ಹೇಳಿದೆ. ‘ಹಾಳಾದ್ದು, ಮಧ್ಯಾಹ್ನ ನಿದ್ದೆ ತಡೆಯ...

Popular Post