ಒಂದು ಊರು ಆ ಊರಿನಲ್ಲಿ ನಾಲ್ಕು ಹಸುಗಳು ಹುಲ್ಲುಗಾವಲಿನ ಬಳಿಯ ಕಾಡಿನಲ್ಲಿ ವಾಸಿಸುತ್ತಿದ್ದವು. ಅವುಗಳು ಉತ್ತಮ ಸ್ನೇಹಿತರಾಗಿದ್ದವು, ಎಲ್ಲಾ ಕಡೆ ಜೊತೆಯಾಗಿ ಹೋಗುತ್ತಿದ್ದವು.
ಅವುಗಳು ಒಟ್ಟಿಗೆ ಮೇಯುತ್ತಿದ್ದರಿಂದ ಮತ್ತು ಒಟ್ಟಿಗೆ ಇರುತ್ತಿದ್ದರಿಂದ ಯಾವುದೇ ಹುಲಿಗಳು ಅಥವಾ ಸಿಂಹಗಳು ಆಹಾರಕ್ಕಾಗಿ ಅವಗಳನ್ನು ಕೊಲ್ಲಲು ಸಾಧ್ಯವಾಗುತ್ತಿರಲಿಲ್ಲ.
ಆದರೆ ಒಂದು ದಿನ, ಹಸುಗಳು ಜಗಳವಾಡಿದವು ಮತ್ತು ಪ್ರತಿ ಹಸು ಬೇರೆ ದಿಕ್ಕಿನಲ್ಲಿ ಮೇಯಲು ಶುರು ಮಾಡಿದವು. ಹುಲಿ ಮತ್ತು ಸಿಂಹ ಇದನ್ನು ನೋಡಿ ಹಸುಗಳನ್ನು ಕೊಲ್ಲಲು ಇದೊಂದು ಸೂಕ್ತ ಅವಕಾಶ ಎಂದು ನಿರ್ಧರಿಸಿ ಪೊದೆಗಳಲ್ಲಿ ಅಡಗಿಕೊಳ್ಳಲು ಶುರು ಮಾಡಿ ಎಲ್ಲಾ ಹಸುಗಳನ್ನು ಒಂದೊಂದಾಗಿ ಕೊಂದು ಹಸುಗಳ ಸ್ನೇಹ ಸಾಮ್ರಜ್ಯವನ್ನು ಕಣ್ಮರೆ ಮಾಡಿದವು.
ನೀತಿ:
ಸ್ನೇಹದಲ್ಲಿ ಮನಸ್ತಾಪ ಇರಕೂಡದು