ಚಿನ್ನದ ಕೋಳಿ
ಒಂದು ಕಾಲದಲ್ಲಿ, ಒಬ್ಬ ರೈತನು ಹೆಬ್ಬಾತು ಸಾಕಿದ್ದನು. ಅದು ಪ್ರತಿದಿನ ಚಿನ್ನದ ಮೊಟ್ಟೆಯನ್ನು ಇಡುತ್ತಿತ್ತು. ಮೊಟ್ಟೆಯಿಂದ ರೈತ ಮತ್ತು ಅವನ ಹೆಂಡತಿಗೆ ಅವರ ದೈನಂದಿನ ಅಗತ್ಯಗಳಿಗಾಗಿ ಸಾಕಷ್ಟು ಹಣ ಸಂಪಾದನೆ ಆಗುತಿತ್ತು. ಆದರಿಂದ ರೈತ ಮತ್ತು ಅವನ ಪತ್ನಿ ಬಹಳ ಕಾಲ ಸಂತೋಷದಿಂದಿದ್ದರು. ಆದರೆ ಒಂದು ದಿನ, ರೈತನಿಗೆ ಒಂದು ಆಲೋಚನೆ ಬಂದು, “ನಾನು ದಿನಕ್ಕೆ ಕೇವಲ ಒಂದು ಮೊಟ್ಟೆಯನ್ನು ಏಕೆ ತೆಗೆದುಕೊಳ್ಳಬೇಕು? ನಾನು ಅವೆಲ್ಲವನ್ನೂ ಒಂದೇ ಬಾರಿಗೆ ತೆಗೆದುಕೊಂಡು ಬಹಳಷ್ಟು ಹಣವನ್ನು ಸಂಪಾದಿಸಲು ಯಾಕೆ ಸಾಧ್ಯವಿಲ್ಲ? ” ಎಂದು ಯೋಚಿಸಿದನು.
ಇದಕ್ಕೆ ಮೂರ್ಖ ರೈತನ ಹೆಂಡತಿ ಸಹ ಒಪ್ಪಿದಳು ಮತ್ತು ಮೊಟ್ಟೆಗಳಿಗಾಗಿ ಹೆಬ್ಬಾತು ಹೊಟ್ಟೆಯನ್ನು ಕತ್ತರಿಸಲು ನಿರ್ಧರಿಸಿದರು. ಅವರು ಹೆಬ್ಬಾತನ್ನು ಕೊಂದು ಹೆಬ್ಬಾತುವಿನ ಹೊಟ್ಟೆಯನ್ನು ತೆರೆದ ತಕ್ಷಣ, ಮಾಂಸ ಮತ್ತು ರಕ್ತವನ್ನು ಹೊರತುಪಡಿಸಿ ಏನನ್ನೂ ಕಣ್ಣಿಗೆ ಕಾಣಿಸಲಿಲ್ಲ. ತನ್ನ ಮೂರ್ಖ ತಪ್ಪನ್ನು ಅರಿತ ರೈತ, ಕಳೆದುಹೋದ ಸಂಪನ್ಮೂಲವನ್ನು ನೆನೆದು ಅಳುತ್ತಾನೆ!
ಕತೆಯ ನೀತಿ:
ಕೆಲಸಕ್ಕೆ ಕೈ ಹಾಕುವ ಮೊದಲು ಯೋಚಿಸಿ
SHAYILAinfo..