ಕಣ್ಣಿನ ಬಗ್ಗೆ ಅದ್ಭುತ ಮಾಹಿತಿಗಳು Amazing information about the eye

Amazing information about the eye


ನಮಸ್ಕಾರ, ಓದುಗ ಮಿತ್ರರೆ,

      ಇಂದು ನಾನು ನಿಮಗೆ ಆಶ್ಚರ್ಯವನ್ನುಂಟುಮಾಡುವಂತಹ ಕಣ್ಣಿನ  ಆಸಕ್ತಿದಾಯಕ ಸಂಗತಿಗಳನ್ನು ಹೇಳಲಿದ್ದೇನೆ, ಆದ್ದರಿಂದ ಆ  ಅದ್ಭುತ ಸಂಗತಿಗಳನ್ನು ತಿಳಿದುಕೊಳ್ಳೋಣ,


ಕಣ್ಣು ನೈಸರ್ಗಿಕ ಉಡುಗೊರೆಯಾಗಿದ್ದು ಅದು ನಮ್ಮ ಸುತ್ತಲಿನ ಸುಂದರವಾದ ವಸ್ತುಗಳನ್ನು ನೋಡಲು ಸಹಾಯ ಮಾಡುತ್ತದೆ.
ಮೆದುಳಿನ ನಂತರ, ಕಣ್ಣು ನಮ್ಮ ದೇಹದ ಅತ್ಯಂತ ಸಂಕೀರ್ಣವಾದ ಭಾಗವಾಗಿದೆ ಆದರಿಂದ ಇಂದು ನಾನು ಕಣ್ಣಿನ ಬಗ್ಗೆ ಕೆಲವು ಸಂಗತಿಗಳನ್ನು ಹೇಳಲಿದ್ದೇನೆ ಬನ್ನಿ ಶುರು ಮಾಡೋಣ.






ಕಣ್ಣು

1. ಮನುಷ್ಯ ಹುಟ್ಟುವಾಗ ಕುರುಡನಾಗಿದ್ರೆ ಅವನು ಜೀವನ ಪರ್ಯಂತ ಕನಸು ಕಾಣಲು ಆಗುವುದಿಲ್ಲ.

2.  ಮನುಷ್ಯನು ಸೀನುವಾಗ ಕಣ್ಣು ಮುಚ್ಚಿಕೊಂಡು ಸೀನುತ್ತಾನೆ. ಕಣ್ಣು ಬಿಟ್ಟುಕೊಂಡು ಸೀನಲು ಎಂದಿಗೂ ಸಾದ್ಯವಿಲ್ಲ.

3. ಗೋಸುಂಬೆ ತನ್ನ ಎರಡೂ ಕಣ್ಣುಗಳನ್ನು ಒಂದೇ ಸಮಯದಲ್ಲಿ ವಿಭಿನ್ನ ದಿಕ್ಕುಗಳಲ್ಲಿ ತಿರುಗಿಸಬಲ್ಲದು.


4. ನಾವು ಯಾವತ್ತು ಕಣ್ಣಿನಿಂದ ನೋಡಲು ಸಾಧ್ಯವಿಲ್ಲ.ಕಣ್ಣುಗಳು ಕೇವಲ ಬೆಳಕನ್ನು ಮಾತ್ರ ತರುತ್ತವೆ. ಆದರೆ ಆ ಬೆಳಕು ಮೆದುಳಿಗೆ ರವಾನೆಯಾಗಿ ನಂತರ ಚಿತ್ರಗಳ ರೂಪಕ್ಕೆ ಮನಸ್ಸಿಗೆ ಕೊಟ್ಟಾಗ ದೃಶ್ಯ ಗೋಚರಿಸುತ್ತದೆ.


6. ಮಗು ಜನಿಸಿ, ಅದು  ಅತ್ತಾಗ ಕಣ್ಣೀರು ಸುರಿಸಲಾಗುವುದಿಲ್ಲ,



7. ಗೋಲ್ಡ್ ಫಿಷ್ ಗಳು ಕಣ್ಣು ಮುಚ್ಚುವುದಿಲ್ಲ.
ಕಣ್ಣಿನ ರೆಪ್ಪೆಗಳನ್ನು ಹೊಂದಿರದ ಕಾರಣ ಇವುಗಳಿಗೆ ಕಣ್ಣು ಮುಚ್ಚಲು ಸಾಧ್ಯವಿಲ್ಲ.


8. ನಮ್ಮ ಕಣ್ಣುಗಳನ್ನು ಕೇಂದ್ರೀಕರಿಸಲು ಕೇವಲ 2 ಮಿಲಿಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ.


9. ನಮ್ಮ ಕಣ್ಣುಗಳು ಕೇವಲ 3 ಬಣ್ಣಗಳನ್ನು ಮಾತ್ರ ನೋಡುತ್ತವೆ - ಕೆಂಪು, ನೀಲಿ ಮತ್ತು ಹಸಿರು



12. ಮಗು ಜನಿಸಿದಾಗ, ಕಪ್ಪು ಮತ್ತು ಬಿಳಿ ಬಣ್ಣವನ್ನು ಮಾತ್ರ ನೋಡುತ್ತದೆ.



13.ಹಕ್ಕಿಗಳಲ್ಲಿ ನೀಲಿ ಬಣ್ಣವನ್ನು ಗುರುತಿಸಬಲ್ಲ ಏಕೈಕ ಹಕ್ಕಿ ಅಂದರೆ ಅದು ಗೂಬೆ ಮಾತ್ರ.



14. ಮಾನವರ ಒಂದು ಕಣ್ಣಿನ ತೂಕ ಸುಮಾರು 8 ಗ್ರಾಂ ವರೆಗೆ ಇರುತ್ತದೆ.



15. ನಮ್ಮ ಮೆದುಳಿನ ಅರ್ಧಕ್ಕಿಂತ ಹೆಚ್ಚು ಕೆಲಸವು ಕಣ್ಣುಗಳಿಂದ ಮಾತ್ರ ಕಂಡುಬರುತ್ತದೆ.



16. ನಾಯಿಗಳು ಕೆಂಪು ಮತ್ತು ಹಸಿರು ಬಣ್ಣದಲ್ಲಿ ಯಾವುದೇ ವ್ಯತ್ಯಾಸವನ್ನು ಕಾಣುವುದಿಲ್ಲ.




17. ನಮ್ಮ ಕಣ್ಣುಗುಡ್ಡೆಯ(ಕೃಷ್ಣಮಣಿ) ಗಾತ್ರವು ಹುಟ್ಟಿನಿಂದ ಸಾವಿನವರೆಗೆ ಒಂದೇ ಗಾತ್ರದಲ್ಲಿರುತ್ತದೆ.



18. ಹುಟ್ಟಿನಿಂದ ಕುರುಡಾಗಿರುವ ಜನರು ಎಂದಿಗೂ ಕನಸು ಕಾಣುವುದಿಲ್ಲ.




19. ಕಣ್ಣಿನಲ್ಲಿ ಸಣ್ಣ ಗಾಯ ಆದರೆ ಗುಣ ಆಗಲು ತೆಗೆದುಕೊಳ್ನುವ ಸಮಯ 48 ಗಂಟೆಗಳು.



20. ಗೂಬೆಗೆ ತನ್ನ ಕಣ್ಣುಗುಡ್ಡೆಯನ್ನು ತಿರುಗಿಸಲು ಸಾಧ್ಯವಾಗುವುದಿಲ್ಲ.



21. ಓಮ್ಮಟೊಫೋಬಿಯಾ ಎನ್ನುವುದು ಕಣ್ಣುಗಳ ಭಯ.



22. ಎಲ್ಲಾ ಕಲಿಕೆಯ 80 ಪ್ರತಿಶತವು ಕಣ್ಣುಗಳ ಮೂಲಕ ಬರುತ್ತದೆ.



23. ಕಣ್ಣುಗಳು 1.7 ಮೈಲಿ ದೂರದಲ್ಲಿರುವ ಮೇಣದ ಬತ್ತಿ ಜ್ವಾಲೆಯನ್ನು ಪತ್ತೆ ಮಾಡಬಹುದು.



24. ಐರಿಸ್ (ನಿಮ್ಮ ಕಣ್ಣಿನ ಬಣ್ಣದ ಭಾಗ) 256 ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದೆ; ನಿಮ್ಮ ಫಿಂಗರ್‌ಪ್ರಿಂಟ್‌ನಲ್ಲಿ ಕೇವಲ 40 ಇದೆ.

25. ಎರಡು ವಿಭಿನ್ನ ಬಣ್ಣದ ಕಣ್ಣುಗಳನ್ನು ಹೊಂದಿರುವ ವೈದ್ಯಕೀಯ ಪದ ಹೆಟೆರೋಕ್ರೊಮಿಯಾ.


26.ನಿಮ್ಮ ಕಣ್ಣುಗುಡ್ಡೆಯ 1/6 ಮಾತ್ರ ಗೋಚರಿಸುತ್ತದೆ.
ನಿಮ್ಮ ಕಣ್ಣುಗಳು ರಾಡ್ ಮತ್ತು ಶಂಕುಗಳಿಂದ ಕೂಡಿದೆ. ಆಕಾರಗಳನ್ನು ನೋಡಲು ರಾಡ್‌ಗಳು ನಿಮಗೆ ಅವಕಾಶ ಮಾಡಿಕೊಡುತ್ತವೆ, ಆದರೆ ಬಣ್ಣಗಳನ್ನು ಪತ್ತೆಹಚ್ಚಲು ಮತ್ತು ಅರ್ಥೈಸಿಕೊಳ್ಳಲು ಶಂಕುಗಳು ಕಾರಣವಾಗಿವೆ.



27. ಸರಾಸರಿ ವ್ಯಕ್ತಿಯು ನಿಮಿಷಕ್ಕೆ 12 ಬಾರಿ ಮಿಟುಕಿಸುತ್ತಾನೆ.



28. ಶಾರ್ಕ್ ಕಾರ್ನಿಯಾವು ಮಾನವ ಕಾರ್ನಿಯಾಕ್ಕೆ ಹೋಲುತ್ತದೆ, ಮತ್ತು ಇದನ್ನು ಮಾನವ ಕಣ್ಣಿನ ಶಸ್ತ್ರಚಿಕಿತ್ಸೆಯಲ್ಲಿಯೂ ಬಳಸಲಾಗುತ್ತದೆ!



29. ಕಣ್ಣು ದೇಹದಲ್ಲಿ ವೇಗವಾಗಿ ಸಂಕುಚಿತಗೊಳ್ಳುವ ಸ್ನಾಯುವಾಗಿದ್ದು, ಸೆಕೆಂಡಿನ 1/100 ಕ್ಕಿಂತ ಕಡಿಮೆ ಸಂಕುಚಿತಗೊಳ್ಳುತ್ತದೆ.



30. ಆಪ್ಟಿಕ್ ನರವು ಒಂದು ದಶಲಕ್ಷಕ್ಕೂ ಹೆಚ್ಚು ನರ ಕೋಶಗಳನ್ನು ಹೊಂದಿರುತ್ತದೆ.
SHAYILAinfo..

Featured Post

ನಿದ್ದೆ ಎಂಬ ಮದ್ದು

ನಿದ್ದೆ ಎಂಬ ಮದ್ದು ‘ಹಗಲು ಎಚ್ಚರ, ರಾತ್ರಿ ಗಡದ್ದಾಗಿ ನಿದ್ದೆ ಮಾಡಿದರೆ ಕೊರೊನಾ ಸದ್ದಿರೋಲ್ವಂತೆ’ ಸುದ್ದಿಸಾರ ಹೇಳಿದೆ. ‘ಹಾಳಾದ್ದು, ಮಧ್ಯಾಹ್ನ ನಿದ್ದೆ ತಡೆಯ...

Popular Post