ಯಾರು ಧರಿಸಬೇಕು?
l ಆರೋಗ್ಯ ಸಮಸ್ಯೆ ಅಥವಾ ಉಸಿರಾಟದ ತೊಂದರೆ ಇಲ್ಲದ ಜನರು ಮನೆಯಲ್ಲಿ ತಯಾರಿಸಿದ ಮಾಸ್ಕ್‌ಗಳನ್ನು ಧರಿಸಬಹುದು
l ಇಂತಹ ಮಾಸ್ಕ್‌ಗಳು ಆರೋಗ್ಯ ಕಾರ್ಯಕರ್ತರು, ಕೋವಿಡ್ ರೋಗಿಗಳು ಮತ್ತು ರೋಗಿಗಳ ಜತೆಗೆ ಸಂಪರ್ಕದಲ್ಲಿ ಇರುವವರ ಬಳಕೆಗೆ ಅಲ್ಲ. ಅಂಥವರು ನಿರ್ದಿಷ್ಟವಾಗಿ ಶಿಫಾರಸು ಮಾಡಿದ ಮಾಸ್ಕ್‌ಗಳನ್ನೇ ಬಳಸಬೇಕು
l ಮನೆಯಲ್ಲಿ ಮಾಸ್ಕ್ ತಯಾರಿಸಿಕೊಳ್ಳುವವರು ಕನಿಷ್ಠ ಎರಡು ಮಾಸ್ಕ್‌ಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಒಂದನ್ನು ಒಗೆದು ಹಾಕಿದಾಗ ಇನ್ನೊಂದನ್ನು ಬಳಸಬಹುದು
l ಮಾಸ್ಕ್ ತಯಾರಿಸಲು ಮನೆಯಲ್ಲಿ ಇರುವ ಶೇ ನೂರರಷ್ಟು ಹತ್ತಿಯ ಬಟ್ಟೆಗಳನ್ನು ಬಳಸಬೇಕು. ಮಾಸ್ಕ್ ತಯಾರಿಸುವ ಮುನ್ನ ಬಟ್ಟೆಯನ್ನು ಕುದಿಯುವ ನೀರಿನಲ್ಲಿ ಐದು ನಿಮಿಷ ಸ್ವಚ್ಛವಾಗಿ ತೊಳೆದು ಸರಿಯಾಗಿ ಒಣಗಿಸಿಕೊಳ್ಳಬೇಕು
l ಮನೆಯಲ್ಲಿರುವ ಎಲ್ಲರಿಗೂ ಪ್ರತ್ಯೇಕವಾದ ಮಾಸ್ಕ್ ತಯಾರಿಸಿಕೊಳ್ಳಬೇಕು. ಯಾವ ಕಾರಣಕ್ಕೂ ಒಬ್ಬರ ಮಾಸ್ಕನ್ನು ಇನ್ನೊಬ್ಬರು ಬಳಸಬಾರದು.
l ಒಂದು ಬಾರಿ ಬಳಸಿದ ಮಾಸ್ಕ್ ಅನ್ನು ತೊಳೆಯದೆ ಮತ್ತೊಮ್ಮೆ ಬಳಸಲೇಬೇಡಿ. ಮಾಸ್ಕ್ ತೇವವಾದ ತಕ್ಷಣ ಅದನ್ನು ಬದಲಾಯಿಸಿ
l ಮಾಸ್ಕ್ ಬಳಸುವ ಮುನ್ನ ಸಾಬೂನು ಹಾಕಿ ಕೈ ತೊಳೆದುಕೊಳ್ಳಬೇಕು
ಸ್ವಚ್ಛ ಮಾಡುವುದು ಹೇಗೆ?
l ಬಳಕೆಯ ನಂತರ ಮಾಸ್ಕ್ ಅನ್ನು ಸಾಬೂನು ಮತ್ತು ಬಿಸಿ ನೀರಿನಲ್ಲಿ ತೊಳೆಯಬೇಕು. ಸೂರ್ಯನ ಬೆಳಕಿನಲ್ಲಿ ಕನಿಷ್ಠ ಐದು ಗಂಟೆ ಒಣಗಿಸಬೇಕು
l ಸೂರ್ಯನ ಬೆಳಕು ಇಲ್ಲ ಎಂದಾದಲ್ಲಿ, ಪ್ರೆಷರ್ ಕುಕ್ಕರ್‌ನಲ್ಲಿ ನೀರಿನೊಂದಿಗೆ ಹಾಕಿ ಹತ್ತು ನಿಮಿಷ ಕುದಿಸಬೇಕು. ನೀರಿಗೆ ಉಪ್ಪು ಹಾಕುವುದು ಉತ್ತಮ. ಕುಕ್ಕರ್ ಕೂಡ ಇಲ್ಲದಿದ್ದರೆ, ನೀರಿಗೆ ಹಾಕಿ 15 ನಿಮಿಷ ಕುದಿಸಿದರೂ ಸಾಕು, ಅಥವಾ
l ತೊಳೆದ ಬಳಿಕ ಐದು ನಿಮಿಷ ಬಿಸಿಗೆ ಒಡ್ಡಬೇಕು. ಇದಕ್ಕಾಗಿ ಇಸ್ತ್ರಿ ಪೆಟ್ಟಿಗೆ ಬಳಸಬಹುದು.