ನಿದ್ದೆ ಎಂಬ ಮದ್ದು

ನಿದ್ದೆ ಎಂಬ ಮದ್ದು

‘ಹಗಲು ಎಚ್ಚರ, ರಾತ್ರಿ ಗಡದ್ದಾಗಿ ನಿದ್ದೆ ಮಾಡಿದರೆ ಕೊರೊನಾ ಸದ್ದಿರೋಲ್ವಂತೆ’ ಸುದ್ದಿಸಾರ ಹೇಳಿದೆ.

‘ಹಾಳಾದ್ದು, ಮಧ್ಯಾಹ್ನ ನಿದ್ದೆ ತಡೆಯೋ
ಕ್ಕಾಗೋಲ್ಲ, ರಾತ್ರಿ ಕಣ್ಮುಚ್ಚಿದರೂ ನಿದ್ದೆ ಸುಳಿಯೋಲ್ಲ’ ಅತ್ತೆ ಗೊಣಗಿದರು.

‘ಒಂದು ತುತ್ತು ಊಟ ಕಡಿಮೆ ಮಾಡಿದರೆ ಕಣ್ಣೆಳೆಯಲ್ಲವೇನೋ’ ನನ್ನ ಪರ್ಮಿಷನ್ ಕೇಳದೆ ನಾಲಿಗೆ ಒದರಿತ್ತು.

‘ಕರೆಂಟು ರಾತ್ರಿಯತನಕ ಬರೋಲ್ವಂತೆ, ಇಡ್ಲಿಗೆ ನೆನೆಸಿದ್ದೀನಿ, ಒರಳು ತೊಳೆದಿಟ್ಟಿದ್ದೀನಿ’ ನನ್ನವಳ ಮಾತಿನ ಬಾಣ ನನ್ನತ್ತ ನೇರವಾಗಿ ಬಂದು ಬಿತ್ತು. ಪುಟ್ಟಿ, ಕಿಸಕ್ಕನೆ ನಕ್ಕಳು.

‘ನಿದ್ದೇನೇ ಒಳ್ಳೆಯ ಮದ್ದು, ಆದರೆ ಬೇಕು ಅಂದಾಗ ಬರೋಲ್ಲ... ಬೇಡವೆಂದಾಗ ಕಣ್ಣೆಳೆಯುತ್ತೆ. ಎಲ್ಲಕ್ಕೂ ಯೋಗ ಬೇಕು’ ಮತ್ತೆ ಸುದ್ದಿಯತ್ತ ಎಲ್ಲರ ಚಿತ್ತ ತಿರುಗಿಸಿದೆ.

‘ಅಪ್ಪಾ, ಆ ವಿಷಯಕ್ಕೆ ಬಂದರೆ ಕಂಠಿ ಅಂಕಲ್ ಯೋಗಿ ಅಲ್ವಾ?’ ಪುಟ್ಟಿಯ ಸಮಯೋಚಿತ ನೆನಕೆ.


‘ಹೌದು ಪುಟ್ಟಿ, ಭಲೇ ಅದೃಷ್ಟವಂತ ಅವನು, ನೆನೆದಾಗ ಕುಳಿತಲ್ಲೇ ತೂಕಡಿಸ್ತಾನೆ’ ಎಂದೆ.

‘ಅವರಲ್ಲಿ ನೀವು ಯಾಕೆ ಸಲಹೆ ಕೇಳಬಾರದು?’ ಅತ್ತೆಯ ಮನವಿ.

‘ಅದಕ್ಕೇನಂತೆ ಈಗ್ಲೇ ಮಾಡ್ತೀನಿ’ ಎಂದು ಅವನ ನಂಬರ್ ಒತ್ತಿದೆ. ಬಿಜಿ...ಬಿಜಿ
ನನ್ನವಳ ಮುಖ ಸಪ್ಪಗಾಯಿತು.

ಛಲಬಿಡದ ತ್ರಿವಿಕ್ರಮನಂತೆ ಪ್ರಯತ್ನಿಸಿದೆ. ಕೊನೆಗೂ ಲೈನಿಗೆ ಬಂದ.
‘ಹಗಲಲ್ಲಿ ನಿದ್ದೆ ಬಾರದಿರಲು ನಿಮಗಿಷ್ಟವಾದ ಸಿನಿಮಾನೋ ಸೀರಿಯಲ್ಲೋ ಒಂದರ ಹಿಂದೊಂದು ನೋಡುತ್ತಲೇ ಇರಿ, ನಿದ್ದೆಯಿಂದ ದೂರವಿರಿ. ರಾತ್ರಿ ನಿದ್ದೆಬರಲು ನಿಮಗೆ ಹಿಡಿಸದ ಪುಸ್ತಕದ ಮೇಲೆ ಕಣ್ಣಾಡಿಸಿ, ಕೆಲವೇ ಸೆಕೆಂಡುಗಳಲ್ಲಿ ಗೊರಕೆ ಹೊಡೆಯದಿದ್ದರೆ ಕೇಳಿ’ ಎಂದು ಆಕಳಿಸುತ್ತಾ ಕರೆ ಮುಗಿಸಿದ.

‘ಸಲಹೆ ಕೊಟ್ರಾ’ ನನ್ನವಳ ಕುತೂಹಲ. ‘ಹ್ಞೂಂ ಸುಲಭ, ಕಷ್ಟವೇನಲ್ಲ’ ಎಂದೆ.

‘ಕರೆಂಟ್ ಬಂದಾಗ ರುಬ್ಬಿಕೊಂಡರಾಯ್ತು, ನಿಧಾನವಾದಷ್ಟೂ ಚೆನ್ನಾಗಿ ನೆನೆದಿರುತ್ತೆ’ ಅತ್ತೆ ನನ್ನ ಪರ ನಿಂತರು.
-ಕೆ.ವಿ.ರಾಜಲಕ್ಷ್ಮಿ

Munjane mathu

Munjane mathu

Kavana

Kavana

ಸೋಂಕು ಹರಡುವ ವನ್ಯಜೀವಿ ಮಾರುಕಟ್ಟೆ

ಸೋಂಕು ಹರಡುವ ವನ್ಯಜೀವಿ ಮಾರುಕಟ್ಟೆ


ಕೆಲವು ಪ್ರಾಣಿಗಳಲ್ಲಿ ವೈರಾಣುಗಳಿರುತ್ತವೆ. ಆ ಪ್ರಾಣಿಗೆ (ಸೋಂಕುವಾಹಕ) ಆ ವೈರಾಣು ಯಾವುದೇ ಹಾನಿ ಮಾಡುವುದಿಲ್ಲ. ಆದರೆ, ಆ (ಸೋಂಕುವಾಹಕ) ಪ್ರಾಣಿಯ ಸಂಪರ್ಕಕ್ಕೆ ಬಂದ ಬೇರೆ ಪ್ರಭೇದದ ಪ್ರಾಣಿಗಳಿಗೆ ವೈರಾಣು ದಾಟಿಕೊಳ್ಳುತ್ತದೆ. ವೈರಾಣು ತಗುಲಿದ ಪ್ರಾಣಿಯು ಅನಾರೋಗ್ಯ ಪೀಡಿತವಾಗುತ್ತದೆ. ನಂತರ ಪ್ರಾಣಿಯಿಂದ ಪ್ರಾಣಿಗಳಿಗೆ ವೈರಾಣು ಹರಡುತ್ತಾ ಹೋಗುತ್ತದೆ


ವೈರಾಣು ಇರುವ ಪ್ರಾಣಿ ಮತ್ತು ಸೋಂಕು ತಗುಲಿರುವ ಪ್ರಾಣಿಯ ಸಂಪರ್ಕಕ್ಕೆ ಬಂದ ಮನುಷ್ಯನಿಗೆ ವೈರಾಣು ದಾಟಿಕೊಳ್ಳುತ್ತದೆ. ಈ ಪ್ರಾಣಿಗಳ ಬೇಟೆಯಾಡುವುದು, ಮಾಂಸಕ್ಕಾಗಿ ಕತ್ತರಿಸುವುದು, ಮಾರಾಟದ ವೇಳೆ ಸ್ಪರ್ಶಿಸುವುದು ಮೊದಲಾದ ಸಂದರ್ಭದಲ್ಲಿ ವೈರಾಣು ಮನುಷ್ಯನಿಗೆ ದಾಟಿಕೊಳ್ಳುತ್ತದೆ. ಇವುಗಳನ್ನು ಖರೀದಿಸಿ, ಸಾಕಿಕೊಳ್ಳುವವರಿಗೂ ಸೋಂಕು ದಾಟಿಕೊಳ್ಳುತ್ತದೆ

ಸೋಂಕು ತಗುಲಿರುವ ವ್ಯಕ್ತಿಯ ಸಂಪರ್ಕಕ್ಕೆ ಬಂದ ಬೇರೆ ವ್ಯಕ್ತಿಗಳಿಗೂ ಸೋಂಕು ತಗಲುತ್ತದೆ. ಹೀಗೆಯೇ ಇದು ವ್ಯಕ್ತಿಗಳಿಂದ ವ್ಯಕ್ತಿಗಳಿಗೆ ಬಹುವೇಗವಾಗಿ ಹರಡುತ್ತದೆ. ಮನುಷ್ಯನ ದೇಹಕ್ಕೆ ಬಂದ ಮೇಲೆ ವೈರಾಣುಗಳ ರೋಗ ಹರಡುವ ರೀತಿಯಲ್ಲಿಯೂ ವ್ಯತ್ಯಾಸ ಆಗಬಹುದು

l ಕಾಡುಪ್ರಾಣಿಗಳ ಜತೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಮಾನವ ಸಂಪರ್ಕದಿಂದ ಪ್ರಾಣಿಗಳ ಸೋಂಕು ಮನುಷ್ಯರಿಗೂ ಅಂಟುತ್ತಿದೆ ಎಂದು ಅಮೆರಿಕ ಹಾಗೂ ಆಸ್ಟ್ರೇಲಿಯಾ ಸಂಶೋಧಕರ ತಂಡದ ಅಧ್ಯಯನ ವರದಿ ಹೇಳಿದೆ

l ಪ್ರಾಣಿಗಳಿಂದ ಇದುವರೆಗೆ 142 ವಿಧದ ವೈರಾಣುಗಳು ಮನುಷ್ಯರಿಗೆ ತಗುಲಿವೆ ಎಂದು ಅಂದಾಜಿಸಲಾಗಿದೆ

l ಪ್ರಾಣಿಗಳಿಂದ ಇದುವರೆಗೆ ಮನುಷ್ಯರಿಗೆ ಅಂಟಿದ ಶೇ 75ರಷ್ಟು ವೈರಾಣುಗಳಲ್ಲಿ ವಾನರಗಳು, ಇಲಿಗಳು ಹಾಗೂ ಬಾವಲಿಗಳು ಕಾರಣವಾಗಿವೆ. ಬಾವಲಿಗಳು ಸಾರ್ಸ್‌, ಎಬೊಲಾದಂತಹ ಸಾಂಕ್ರಾಮಿಕ ರೋಗಗಳ ವೈರಾಣು ಹರಡಲು ಕಾರಣ ಎನ್ನುತ್ತವೆ ಸಂಶೋಧನಾ ವರದಿಗಳು

l ವಾರ್ಷಿಕ ಸಾವಿರಾರು ಕೋಟಿ ಡಾಲರ್‌ ವಹಿವಾಟಿಗೆ ಕಾರಣವಾಗುವ ವನ್ಯಜೀವಿ ಹಾಗೂ ವನಸ್ಪತಿಗಳ ಜಾಗತಿಕ ಮಾರುಕಟ್ಟೆಗಳನ್ನು ಕಾಯಂ ಆಗಿ ಮುಚ್ಚುವಂತೆ ಪ್ರಪಂಚದಾದ್ಯಂತ ಒತ್ತಡಗಳು ಹೆಚ್ಚುತ್ತಿವೆ

l ಜಾಗತಿಕ ವನ್ಯಜೀವಿ ಮಾರುಕಟ್ಟೆಯಲ್ಲಿ ಮಂಗಗಳು, ನರಿಗಳು, ಜಿಂಕೆಗಳು, ಮೊಸಳೆ, ಹಾವು ಸೇರಿದಂತೆ ಸರೀಸೃಪಗಳು, ಸಿವೆಟ್‌ಗಳು ಅಳಿಲುಗಳು, ಮೊಲಗಳು, ಇಲಿಗಳು, ನೂರಾರು ಪ್ರಭೇದಗಳ ಪಕ್ಷಿಗಳು ಮಾರಾಟವಾಗುತ್ತವೆ. ಚೀನಾದ ಗುವಾಂಗ್‌ಝೌನಲ್ಲಿ ಜೀವಂತ ಪ್ರಾಣಿಗಳ ಅತಿ ದೊಡ್ಡ ಮಾರುಕಟ್ಟೆಯಿದೆ. ಇಂಡೋನೇಷ್ಯಾ ಹಾಗೂ ಥಾಯ್ಲೆಂಡ್‌ಗಳು ಸಹ ಏಷ್ಯಾದ ಪ್ರಮುಖ ವನ್ಯಜೀವಿ ಮಾರುಕಟ್ಟೆ ಎನಿಸಿವೆ

l ಭಾರತದಂತಹ ಕೆಲವು ದೇಶಗಳಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡುವುದು ಅಥವಾ ಹಿಡಿದು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದರೆ, ಚೀನಾದಲ್ಲಿ ಕೆಲವು ಕಾಡುಪ್ರಾಣಿಗಳ ಮಾರಾಟಕ್ಕೆ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಲಿನ ವನ್ಯಜೀವಿ ಮಾರುಕಟ್ಟೆಗಳಲ್ಲಿ ಬಾವಲಿಗಳು, ನವಿಲುಗಳು ಹಾಗೂ ವಿವಿಧ ಪ್ರಭೇದಗಳ ಪಕ್ಷಿಗಳು ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತವೆ. ಕೊರೊನಾ ವೈರಾಣು ಹರಡಿದ ಮೇಲೆ ಚೀನಾ ದೇಶವು ವನ್ಯಜೀವಿ ಮಾರುಕಟ್ಟೆ ವಹಿವಾಟನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಪ್ರಾಣಿಗಳಿಂದ ವಿವಿಧ ಸ್ವರೂಪದಲ್ಲಿ ಮನುಷ್ಯನಿಗೆ ಸೋಂಕು ಅಂಟುತ್ತದೆ. ಸೊಳ್ಳೆಗಳ ಕಡಿತ, ಅನಾರೋಗ್ಯಪೀಡಿತ ಪ್ರಾಣಿಗಳ ಸಂಪರ್ಕ, ಕಾಡುಪ್ರಾಣಿಗಳ ಮಾಂಸವನ್ನು ಬೇಯಿಸದೇ ತಿನ್ನುವುದು ಹೀಗೆ ಯಾವುದೇ ವಿಧದಲ್ಲಿ ಸೋಂಕು ತಗುಲಬಹುದು. ಬ್ಯಾಕ್ಟೀರಿಯಾಗಳು, ಪರಾವಲಂಬಿ ಜೀವಿಗಳು, ವೈರಾಣುಗಳು ಹಾಗೂ ಶೀಲಿಂಧ್ರಗಳು – ಇವುಗಳಲ್ಲಿ ಯಾವುದೇ ರೂಪದಲ್ಲಿ ಸೋಂಕು ಮನುಷ್ಯನ ಶರೀರವನ್ನು ಸೇರಬಹುದು. ಜಗತ್ತಿನ ಶೇ 16ರಷ್ಟು ಪ್ರಮಾಣದ ಸಾವುಗಳಿಗೆ ಸೋಂಕು ಕಾರಣ ಎಂದು ಅಮೆರಿಕ
ರಾಷ್ಟ್ರೀಯ ಆರೋಗ್ಯ ಸಂಸ್ಥೆ ಲೆಕ್ಕ ಹಾಕಿದೆ.

ಕೊರೊನಾ ಕಂಟಕ ವಿಪರೀತ ಪ್ರಮಾಣ ತಲುಪಿರುವ ಈ ಹಂತದಲ್ಲಿ ಜಗತ್ತಿನ ಎಲ್ಲೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಮಾತನಾಡಲಾಗುತ್ತಿದೆ. ಆದರೆ, ಇಂತಹ ಸೋಂಕುಗಳು ಭವಿಷ್ಯದಲ್ಲಿ ಕಾಡದಿರಬೇಕಾದರೆ ಕಾಡುಪ್ರಾಣಿಗಳ ಜತೆ ಅಂತರ ಕಾಯ್ದುಕೊಳ್ಳುವುದು ಮುಖ್ಯವಾದುದು ಎಂಬುದು ವಿಜ್ಞಾನಿಗಳ ಸಲಹೆಯಾಗಿದೆ.

ಚೀನಾ, ಥಾಯ್ಲೆಂಡ್‌, ಇಂಡೋನೇಷ್ಯಾ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಅಸ್ತಿತ್ವದಲ್ಲಿರುವ ಜೀವಂತ ಕಾಡುಪ್ರಾಣಿಗಳ ಮಾರುಕಟ್ಟೆಗಳು ಮಾನವ–ಪ್ರಾಣಿಗಳ ನೇರ ಸಂಪರ್ಕಕ್ಕೆ ಆಸ್ಪದ ನೀಡುವುದರಿಂದ ಸೋಂಕು ಹರಡುವ ಪ್ರಮುಖ ತಾಣಗಳಾಗಿವೆ ಎಂದು ವಿಶ್ಲೇಷಿಸಲಾಗಿದೆ.

ಜಗತ್ತಿನ ಜನಸಂಖ್ಯೆ ಇದೀಗ 900 ಕೋಟಿಗೆ ಹತ್ತಿರವಾಗಿದೆ. ಇಷ್ಟೊಂದು ಪ್ರಮಾಣದ ಜನರಿಗೆ ಆಹಾರ ಉತ್ಪಾದನೆ ಮಾಡುವುದೂ ಒಂದು ದೊಡ್ಡ ಸವಾಲಾಗಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ವನ್ಯಜೀವಿ ವಲಯವನ್ನು ಆಕ್ರಮಿಸುವ ಪರಿಪಾಟ ಜಗತ್ತಿನ ಎಲ್ಲ ಭಾಗಗಳಲ್ಲೂ ನಡೆದಿದೆ. ಪ್ರತಿವರ್ಷ 30 ಲಕ್ಷ ಹೆಕ್ಟೇರ್‌ನಷ್ಟು ಕಾಡು ಬಲಿಯಾಗುತ್ತಿದೆ ಎನ್ನುತ್ತವೆ ಸಂಶೋಧನಾ ವರದಿಗಳು.

ಚೀನಾದ ವುಹಾನ್‌ನಲ್ಲಿನ ವನ್ಯಜೀವಿಗಳ ಮಾರುಕಟ್ಟೆಯಿಂದ ಮನುಷ್ಯನಿಗೆ ಸೋಂಕು ತಗುಲಿದೆ. ಈ ಸೋಂಕು ತಗುಲಿದ ಗುಂಪು ಇತರ ಮಾರುಕಟ್ಟೆಗಳ ಜತೆ ಸಂಪರ್ಕ ಹೊಂದಿತ್ತು

ಈ ಗುಂಪನಿಂದ ವುಹಾನ್‌ ನಗರವಾಸಿಗಳಿಗೆ ನಂತರ ಬೇರೆ ದೇಶಗಳಿಗೆ ಮತ್ತು ಈಗ ಜಾಗತಿಕವಾಗಿ ಹರಡಿದೆ

ಯಾವ ಪ್ರಾಣಿಯಿಂದ ಈ ವೈರಾಣು ಬಂದಿದೆ ಎಂಬುದು ದೃಢಪಟ್ಟಿಲ್ಲ. ಆದರೆ, ಸಾರ್ಸ್‌ ಸೋಂಕಿಗೆ ಕಾರಣವಾಗಿದ್ದ ಬಾವಲಿಗಳ ಕೊರೊನಾ ವೈರಾಣುವನ್ನೇ ಹೋಲುತ್ತಿದೆ ಈಗಿನ ಕೋವಿಡ್‌–19 ಕಾಯಿಲೆಗೆ ಕಾರಣವಾಗುವ ವೈರಾಣು. ಬಾವಲಿಯಿಂದ ಸಿವೆಟ್‌ಗಳಿಗೆ, ನಂತರ ಸಿವೆಟ್‌ಗಳಿಂದ ಮನುಷ್ಯರಿಗೆ ಹರಡಿದೆ ಎಂಬ ಪ್ರತಿಪಾದನೆ ಇದೆ. ಆದರೆ, ಇದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ

ಆಧಾರ: ವೈಲ್ಡ್‌ಲೈಫ್‌ ಕನ್ಸರ್ವೇಷನ್ ಸೊಸೈಟಿ ಇಂಡಿಯಾ, ಬಿಬಿಸಿ

ಮಾನವ ಕುಲಕ್ಕೆ ಹೊಸ ಪಾಠ ಕಲಿದೆ ಕೊರೊನಾ

Zoom ಮಾಡಲು ಮೊದಲು image ಮೇಲೆ ಒಂದು click ಮಾಡಿ, ನಂತರ zoom ಮಾಡಿ.

ಮಾನವ ಕುಲಕ್ಕೆ ಹೊಸ ಪಾಠ ಕಲಿದೆ ಕೊರೊನಾ

ಮಾನವ ಕುಲಕ್ಕೆ ಹೊಸ ಪಾಠ ಕಲಿದೆ ಕೊರೊನಾ

ಮಾನವ ಕುಲಕ್ಕೆ ಹೊಸ ಪಾಠ ಕಲಿದೆ ಕೊರೊನಾ

ವ್ಯಕ್ತಿಸ್ವಾತಂತ್ರ್ಯ ಹಾಗೂ ಸಮಷ್ಟಿಯ ಹಿತದ ನಡುವೆ ಬೇಕು ಸಮತೋಲನ

ವ್ಯಕ್ತಿಸ್ವಾತಂತ್ರ್ಯ ಹಾಗೂ ಸಮಷ್ಟಿಯ ಹಿತದ ನಡುವೆ ಬೇಕು ಸಮತೋಲನ
ವ್ಯಕ್ತಿಸ್ವಾತಂತ್ರ್ಯ ಹಾಗೂ ಸಮಷ್ಟಿಯ ಹಿತದ ನಡುವೆ ಬೇಕು ಸಮತೋಲನ



ವ್ಯಕ್ತಿವಾದ ಅಥವಾ ಪ್ರತೀ ವ್ಯಕ್ತಿಗೂ ಅವನದೇ ಆದ ಬೆಲೆ ಇದೆ ಎನ್ನುವ ನಂಬಿಕೆಯು ನಮ್ಮ ಅರ್ಥವ್ಯವಸ್ಥೆ, ನ್ಯಾಯದಾನ ವ್ಯವಸ್ಥೆ ಹಾಗೂ ಸಾಮಾಜಿಕ ವ್ಯವಸ್ಥೆಯ ಹಿಂದಿನ ಆಲೋಚನೆಗಳಿಗೆ ನೆಲೆಗಟ್ಟಾಗಿ ಶತಮಾನ
ಗಳಿಂದಲೂ ನಿಂತುಕೊಂಡಿದೆ. ಆದರೆ, ಜನರ ಹಕ್ಕುಗಳು ಹಾಗೂ ಸ್ವಾತಂತ್ರ್ಯಕ್ಕೆ ಹೆಚ್ಚಿನ ಬೆಲೆ ಎನ್ನುವ ಮೌಲ್ಯಕ್ಕೆ ಈಚಿನ ದಿನಗಳಲ್ಲಿ ತೀವ್ರ ಸವಾಲುಗಳು ಎದುರಾಗಿವೆ. ಐರೋಪ್ಯ ಜಗತ್ತು ಕಂಡ ಜ್ಞಾನೋದಯದ ಕಾಲಘಟ್ಟ
ದಲ್ಲಿಯೇ ವ್ಯಕ್ತಿವಾದದ ಮೂಲವೂ ಇದೆ. ಪ್ರಭುತ್ವ ಅಥವಾ ಸಾಮಾಜಿಕ ಗುಂಪುಗಳ ಹಿತಾಸಕ್ತಿಗಳಿಗಿಂತಲೂ ವ್ಯಕ್ತಿಯ ಹಿತಾಸಕ್ತಿಗಳು ಹೆಚ್ಚು ಮುಖ್ಯವಾಗುತ್ತವೆ ಎಂದು ವ್ಯಕ್ತಿವಾದ ಹೇಳುತ್ತದೆ. ಇದು ಮುಕ್ತ ಮಾರುಕಟ್ಟೆಯ ವ್ಯವಸ್ಥೆಗೆ ಜನ್ಮನೀಡಿತು ಕೂಡ.

ಪಾಶ್ಚಿಮಾತ್ಯ ಶೈಲಿಯ ವ್ಯಕ್ತಿವಾದವು ಎರಡನೆಯ ವಿಶ್ವಯುದ್ಧದ ನಂತರದಲ್ಲಿ ಹೆಚ್ಚು ವ್ಯಾಪಕವಾಯಿತು. ಯುರೋಪಿನ ಬಹುದೊಡ್ಡ ಭೂಪ್ರದೇಶವು ಕಮ್ಯುನಿಸ್ಟ್‌ ವ್ಯವಸ್ಥೆಯ ಅಡಿಯಲ್ಲಿ ಇದ್ದರೂ, ಚೀನಾವು ಮುಕ್ತ ಮಾರುಕಟ್ಟೆಗೆ ತೆರೆದುಕೊಳ್ಳದಿದ್ದರೂ ಅಮೆರಿಕದ ನಾಯಕತ್ವದ ಕಾರಣದಿಂದಾಗಿ ವ್ಯಕ್ತಿವಾದವು ಮುನ್ನಡೆ ಕಾಣುತ್ತಿತ್ತು– ಸ್ವಾಭಿಮಾನಿ ಹಾಗೂ ಗಟ್ಟಿತನದ ಮನುಷ್ಯ ಈ ವಾದದ ಕೇಂದ್ರಬಿಂದುವಿನಲ್ಲಿ ಇದ್ದ, ಮುಕ್ತ ಆಲೋಚನೆಗಳ ಮೂಲಕ ಪ್ರಗತಿಯ ಚಕ್ರ ತಿರುಗಿಸುತ್ತಿದ್ದ.

ಆ ಕಾಲಘಟ್ಟದಲ್ಲೇ ಇನ್ನೊಂದು ಬಗೆಯ ವ್ಯಕ್ತಿವಾದ ಕೂಡ ಚಾಲ್ತಿಯಲ್ಲಿ ಇತ್ತು. ಇದು ಗಾಂಧೀಜಿ ಮತ್ತು ಅವರ ಸಲಹೆಗಾರರ ನಂಬಿಕೆಗಳನ್ನು ಆಧರಿಸಿತ್ತು. ಈ ವ್ಯಕ್ತಿ
ವಾದಕ್ಕೆ ಆಧ್ಯಾತ್ಮಿಕ ಬೇರುಗಳು ಇದ್ದವು. ಪಾಶ್ಚಿಮಾತ್ಯ
ಶೈಲಿಯ ವ್ಯಕ್ತಿವಾದವು ಭೌತಿಕವಾದವಷ್ಟೇ ಆಗಿಬಿಡ
ಬಹುದು ಎಂಬುದನ್ನು ಗಾಂಧೀಜಿ ಗುರುತಿಸಿದ್ದರು. ವ್ಯಕ್ತಿಯು ತನ್ನ ಆಸೆಗಳನ್ನು ಪೂರೈಸಿಕೊಳ್ಳುವ ದಾರಿಗಳನ್ನು ಬಲ್ಲವನಷ್ಟೇ ಅಲ್ಲ; ಆತ ಸರಿ–ತಪ್ಪುಗಳನ್ನು ಗುರುತಿಸ
ಬಲ್ಲವ, ತನ್ನ ಕೃತ್ಯಗಳಿಗೆ ಉತ್ತರದಾಯಿ ಕೂಡ ಆಗಬಲ್ಲವ ಎಂಬುದಾಗಿ ಕಂಡುಕೊಂಡಿದ್ದರು. ಸಾಮಾಜಿಕ ಪ್ರಗತಿಯ ಕೇಂದ್ರಭಾಗದಲ್ಲಿ ಮಾನವ ಹಕ್ಕುಗಳನ್ನು ಇರಿಸಲಾಗಿತ್ತು. ಕಟ್ಟಕಡೆಯ ಮನುಷ್ಯನ ಮೇಲೆ ಗಮನ ನೀಡುವ ಈ ವ್ಯವಸ್ಥೆಯಡಿ, ಆತನ ಹೆಸರಿನಲ್ಲೇ ಸಮಾಜ ಮತ್ತು ಪ್ರಭುತ್ವವು ತಮ್ಮ ಧರ್ಮ ಪಾಲಿಸುತ್ತಿದ್ದವು.

ಮೊದಲ ಮಾದರಿಯ ವ್ಯಕ್ತಿವಾದವು ಮೂರು ಶತಮಾನಗಳ ಕಾಲ ತೀವ್ರಬಗೆಯ ಅನ್ವೇಷಣೆಗಳನ್ನು
ಸಾಧ್ಯವಾಗಿಸಿತು. ಉದ್ಯಮಿಗಳು, ಸೃಜನಶೀಲ ಕಲಾವಿದರು, ಸಾರ್ವಜನಿಕ ಬುದ್ಧಿಜೀವಿಗಳು ಆಲೋಚನೆಗಳಿಗೆ, ಉತ್ಪನ್ನಗಳಿಗೆ ಮತ್ತು ಸೇವೆಗಳಿಗೆ ಜಾಗತಿಕ ಮಾರುಕಟ್ಟೆಯನ್ನು ಸೃಷ್ಟಿಸಿದರು. ಇದು ಹೆಚ್ಚಿನ ಜನರಿಗೆ ಹಿಂದೆಂದೂ ಇಲ್ಲದಷ್ಟು ಭೌತಿಕ ಸಂಪತ್ತನ್ನು ಸೃಷ್ಟಿಸಿತು– ಈ ಮಾತಿಗೆ ಪ್ರತಿವಾದಗಳು ಇವೆ.

ಎರಡನೆಯ ಮಾದರಿಯ ವ್ಯಕ್ತಿವಾದವು, ಹಲವು ದುರ್ಬಲ ಗುಂಪುಗಳ ಅಭಿವೃದ್ಧಿಗಾಗಿ, ಅವರಿಗೆ ಬೆಂಬಲವಾಗಿ ಪ್ರಭುತ್ವ ಮತ್ತು ಸಮಾಜ ಮಧ್ಯಪ್ರವೇಶ ಮಾಡುವುದಕ್ಕೆ ಪ್ರೇರಣೆಯಾಯಿತು. ವ್ಯಕ್ತಿಯ ಘನತೆಯನ್ನು, ಸವಾಲುಗಳನ್ನು ಎದುರಿಸುವ ಸಾಮರ್ಥ್ಯ
ವನ್ನು ಕಾಪಾಡಿಕೊಂಡೇ ಪ್ರತೀ ವ್ಯಕ್ತಿಗೂ ಸಾಮಾಜಿಕ ಸುರಕ್ಷಾ ಕ್ರಮಗಳನ್ನು ಕಲ್ಪಿಸಿಕೊಡುವ ಇದು ಪೂರ್ಣಪ್ರಮಾಣದಲ್ಲಿ ಜಾರಿಯಾಗದೇ ಇದ್ದರೂ  ಬಹುದೊಡ್ಡ ಪ್ರಯೋಗವಂತೂ ಹೌದು. ಆದರೆ, ವ್ಯಕ್ತಿವಾದ ಹಾಗೂ ವ್ಯಕ್ತಿಗೆ ಪ್ರಾಧಾನ್ಯ ನೀಡುವ ವ್ಯವಸ್ಥೆಗೆ ಕಳೆದೊಂದು ದಶಕದಲ್ಲಿ ಗಂಭೀರ ಅಪಾಯಗಳು ಎದುರಾಗಿವೆ.

ಇದಕ್ಕೆ ಮೂರು ಪ್ರಮುಖ ಕಾರಣಗಳು ಇವೆ. ಆರ್ಥಿಕ ಕುಸಿತದ ಜೊತೆ ಭಯೋತ್ಪಾದನೆಯೂ ಸೇರಿಕೊಂಡಿದ್ದು ಮೊದಲ ಕಾರಣ. 2001ರಲ್ಲಿ ಅಮೆರಿಕದ ಮೇಲೆ ಭಯೋತ್ಪಾದಕರ ದಾಳಿ ನಡೆದಾಗ ಪರಿಸ್ಥಿತಿ ಬದಲಾಯಿತು, ಇದು ವ್ಯಕ್ತಿವಾದಕ್ಕೆ ಎದುರಾದ ಅತಿದೊಡ್ಡ ಶಾಕ್‌ ಟ್ರೀಟ್ಮೆಂಟ್‌. ವ್ಯಕ್ತಿವಾದ ಹಾಗೂ ಉದಾರತಾವಾದದ ಗಟ್ಟಿ ನೆಲೆ ಅಮೆರಿಕ. ಆದರೆ ಅಲ್ಲಿನ ಜನ ಸಾರ್ವಜನಿಕ ಸುರಕ್ಷತೆಗಾಗಿ ಹಲವು ಸ್ವಾತಂತ್ರ್ಯ
ಗಳನ್ನು ಮತ್ತು ಖಾಸಗಿತನವನ್ನು ಬಿಟ್ಟುಕೊಡ
ಬೇಕಾಯಿತು. ಇದಾದ ನಂತರ ಎದುರಾಗಿದ್ದು 2008ರ ಆರ್ಥಿಕ ಕುಸಿತ. ಇದರ ಬೆನ್ನಿಗೇ ನಾವು ಜಾಗತೀಕರಣೋ
ತ್ತರ ಯುಗವನ್ನು ಪ್ರವೇಶಿಸಿದೆವು. ಕಾಕತಾಳೀಯ ಎಂಬಂತೆ ಪ್ರಭುತ್ವದ ಅಧಿಕಾರವನ್ನು ಕೇಂದ್ರೀಕೃತ
ವಾಗಿಸುವ ಸರ್ವಾಧಿಕಾರಿ ಆಡಳಿತಗಳೂ ಆ ಹೊತ್ತಿನಲ್ಲಿ ಪ್ರವರ್ಧಮಾನಕ್ಕೆ ಬಂದವು.


ವ್ಯಕ್ತಿಯೊಬ್ಬ ತನ್ನ ದೇಶದ ಬಗ್ಗೆ ಹೊಂದಿರುವ ಪ್ರೀತಿಯನ್ನು ಪ್ರಾಮಾಣಿಕ ಟೀಕೆಗಳ ಮೂಲಕವೂ
ವ್ಯಕ್ತಪಡಿಸಬಹುದಾಗಿದ್ದ ಭಾವುಕ ದೇಶಭಕ್ತಿಯು ಹಲವು ದೇಶಗಳಲ್ಲಿ ಬಿರುಸಿನ ರಾಷ್ಟ್ರೀಯವಾದವಾಗಿ ಪರಿವರ್ತನೆ ಕಂಡಿತು. ಭಿನ್ನಮತಕ್ಕೆ ವಿರೋಧ ಎದುರಾಯಿತು. ಇದು ಸ್ವತಂತ್ರ ವ್ಯಕ್ತಿಯನ್ನು ರಾಜಕೀಯ ವೇದಿಕೆಯಿಂದ ಮತ್ತಷ್ಟು ಹೊರಗೆ ತಳ್ಳಿತು.

ಬೃಹತ್ ಸಾಮಾಜಿಕ ವೇದಿಕೆಗಳನ್ನು ಕಲ್ಪಿಸಿದ ಇಂಟರ್ನೆಟ್ ದೈತ್ಯರ ಉಗಮ ಎರಡನೆಯ ಕಾರಣ. ಆರಂಭದಲ್ಲಿ ಇವು ವ್ಯಕ್ತಿಪ್ರಾಧಾನ್ಯವನ್ನು ರಕ್ಷಿಸುವಂತೆ ಕಂಡುಬಂದವು. ಗ್ರಾಹಕನೇ ರಾಜನಾಗಿದ್ದ; ಕಾರ್ಮಿಕನಾಗಿದ್ದ ನೌಕರ ಸ್ವಯಂಉದ್ಯೋಗ ಕಂಡುಕೊಂಡು ಉದ್ಯಮಿ
ಯಾಗಿದ್ದ; ಪೌರನು (ಸಿಟಿಜನ್) ನೆಟ್ಟಿಗ (ನೆಟಿಜನ್) ಆಗಿದ್ದ. ಆತ ಎಲ್ಲ ವಿಚಾರಗಳ ಬಗ್ಗೆಯೂ ತನ್ನ ಅಭಿಪ್ರಾಯ ವ್ಯಕ್ತಪಡಿಸಬಲ್ಲವನಾಗಿದ್ದ. ಆದರೆ ವ್ಯಕ್ತಿ ಹೊಂದಿರುವ ಆಯ್ಕೆಯು ಮರೀಚಿಕೆಯಂತಾಯಿತು. ಈಗ ಕಣ್ಗಾವಲು ಬಂಡವಾಳಶಾಹಿ ವ್ಯವಸ್ಥೆ ಎಂದು ಹೇಳುವುದರ ಆರಂಭ ಅದಾಗಿತ್ತು. ಇಲ್ಲಿ ಗುತ್ತಿಗೆ ಆಧಾರದಲ್ಲಿ ಕರೆದಾಗ ಬಂದು ಕೆಲಸ ಮಾಡುವವರಿಗೆ ಆದಾಯ ಕಡಿಮೆ, ಕೆಲಸ ಜಾಸ್ತಿ! ಗ್ರಾಹಕನು ಇಲ್ಲಿ ದತ್ತಾಂಶ ಮಾತ್ರ; ಕೃತಕ ಬುದ್ಧಿಮತ್ತೆಯನ್ನು ಬಳಸಿ ಆತನ ಸ್ವತಂತ್ರ ಆಲೋಚನೆಗಳನ್ನು ಕೂಡ ಬೇಕಾದಂತೆ ಬಾಗಿಸಬಹುದು. ಇದೇ ತಂತ್ರಜ್ಞಾನವು ಕಣ್ಗಾವಲು ವ್ಯವಸ್ಥೆಗೆ ಇನ್ನಷ್ಟು ಇಂಬು ನೀಡಿತು, ವ್ಯಕ್ತಿಯ ಹಕ್ಕುಗಳು ಮತ್ತು ಖಾಸಗಿತನವನ್ನು ಇನ್ನಷ್ಟು ಕಿರಿದಾಗಿಸಿತು. ಚುನಾವಣಾ ಪ್ರಜಾತಂತ್ರದಲ್ಲಿ ಅತ್ಯಮೂಲ್ಯ
ವಾದ ವ್ಯಕ್ತಿಯ ಮತಗಳನ್ನು ಕೂಡ ತಿರುಚಬಹುದು!

ಮೂರನೆಯ ಕಾರಣ, ಜಗತ್ತಿನಲ್ಲಿ ಪರಸ್ಪರ ಅವಲಂಬನೆ ಇನ್ನಷ್ಟು ಹೆಚ್ಚಾಗಿರುವುದು. ಹವಾಮಾನ ಬದಲಾವಣೆ ಹಾಗೂ ವಾಯುಮಾಲಿನ್ಯಕ್ಕೆ ಗಡಿಗಳ ಹಂಗಿಲ್ಲ. ಆಫ್ರಿಕಾದ ಬ್ಯಾಕ್ಟೀರಿಯಾಗಳು ಅಮೆರಿಕದ ಜನರನ್ನು ಅನಾರೋಗ್ಯಕ್ಕೆ ಈಡುಮಾಡಬಲ್ಲವು.
ಇಂಡೊನೇಷ್ಯಾದಲ್ಲಿ ಅರಣ್ಯಕ್ಕೆ ಬೆಂಕಿ ಬಿದ್ದರೆ ಏಷ್ಯಾದ ಜನ ಉಸಿರಾಡಲು ಕಷ್ಟಪಡಬೇಕಾಗುತ್ತದೆ. ನಾವು ಎಚ್ಚರಿಕೆಯಿಂದ ಇರದಿದ್ದರೆ, ಕೋವಿಡ್–19 ವ್ಯಕ್ತಿವಾದದ ಶವಪೆಟ್ಟಿಗೆಯ ಮೇಲಿನ ಅಂತಿಮ ಮೊಳೆ ಆಗಬಹುದು. ವೈಯಕ್ತಿಕ ಹಕ್ಕು, ಸೌಲಭ್ಯಗಳನ್ನು ನಾವು ತಕ್ಷಣವೇ ಬಿಟ್ಟುಕೊಡುವಂತೆ, ಪ್ರಭುತ್ವದ ಹಾಗೂ ನಮ್ಮ ಹತ್ತಿರದ ಗುಂಪುಗಳ ನಿರ್ದೇಶನಗಳನ್ನು ಒಪ್ಪಿಕೊಳ್ಳು
ವಂತೆ ಮಾಡಿದೆ ಈ ಕಾಯಿಲೆ. ಈ ಸ್ವಾತಂತ್ರ್ಯಗಳನ್ನು
ಬಳಸುವುದನ್ನು ಮುಂದುವರಿಸಿದರೆ ಆಗುವ ಅಪಾಯವನ್ನು ಗಮನಿಸಿ, ಅವುಗಳನ್ನು ಬಿಟ್ಟುಕೊಡುವ ತೀರ್ಮಾನ ಮಾಡಿದ್ದು ಸರಿಯಾಗಿಯೇ ಇದೆ.

ಆದರೆ, ವ್ಯಕ್ತಿವಾದದ ಒಳ್ಳೆಯ ಅಂಶಗಳನ್ನು ಕಳೆದು
ಕೊಳ್ಳದಿರುವ ಎಚ್ಚರಿಕೆಯೂ ನಮ್ಮಲ್ಲಿರಬೇಕು.
‌ಕಾನೂನಿನ ಆಡಳಿತಕ್ಕೆ ಅಥವಾ ವಿಸ್ತೃತ ವ್ಯವಸ್ಥೆಗಳಿಗೆ
ಉತ್ತರದಾಯಿ ಅಲ್ಲದ ದಬ್ಬಾಳಿಕೆಯ ಗುಂಪುಗಳ ಎದುರು ವ್ಯಕ್ತಿಯ ಅಸ್ಮಿತೆ ಮರೆಯಾಗದಂತೆಯೂ ನಾವು ನೋಡಿಕೊಳ್ಳಬೇಕು. ಸರ್ಕಾರದ ಆದೇಶವನ್ನು ಪಾಲಿಸುವುದು ಒಂದು ವಿಚಾರ; ತರ್ಕವಿಲ್ಲದ ಭೀತಿಗೆ ಬಲಿಯಾಗುವುದು ಇನ್ನೊಂದು ವಿಚಾರ. ಜನ ತಾವೇ ಕಾನೂನು ಕೈಗೆತ್ತಿಕೊಳ್ಳುವುದು ಹೆಚ್ಚುತ್ತಿರುವುದನ್ನು
ಈಗಾಗಲೇ ನೋಡುತ್ತಿದ್ದೇವೆ. ಭಯಭೀತರಾದ ಗ್ರಾಮಸ್ಥರು ಹೊರಗಿನವರಿಗೆ ಪ್ರವೇಶ ನಿರಾಕರಿಸುವುದು; ವೈದ್ಯರಿಗೆ ಪೇಟೆಯಲ್ಲಿರುವ ತಮ್ಮ ಮನೆಗಳಿಗೆ ಹಿಂದಿರುಗಲು ಅವಕಾಶ ನಿರಾಕರಿಸಿರುವುದು; ಯಾವ ಭೀತಿಯೂ ಇಲ್ಲದೆ ಪೊಲೀಸರು ಲಾಠಿ ಬೀಸುವುದು...

ಸಾಂಕ್ರಾಮಿಕವೊಂದಕ್ಕೆ ಈ ರೀತಿಯಲ್ಲಿ ಪ್ರತಿಕ್ರಿಯಿಸು
ವುದು ವ್ಯಕ್ತಿವಾದದ ಒಳ್ಳೆಯ ಅಂಶಗಳನ್ನು ಸದ್ಯದ ಭವಿಷ್ಯದಲ್ಲಿ ಕೊನೆಗೊಳಿಸಬಹುದು. ವ್ಯಕ್ತಿಸ್ವಾತಂತ್ರ್ಯ ಹಾಗೂ ಸಮಷ್ಟಿಯ ಹಿತದ ನಡುವಿನ ಸಮತೋಲನವನ್ನು
ಪುನಃ ಸ್ಥಾಪಿಸಲು ಸಮಾಜವು ತಕ್ಷಣ ಕ್ರಿಯಾಶೀಲವಾಗಬೇಕು. ಯಾವ ಮನುಷ್ಯನೂ ದ್ವೀಪವಲ್ಲ; ಆದರೆ ಪ್ರತೀ ವ್ಯಕ್ತಿಗೂ ಇರುವ ಮೌಲ್ಯವನ್ನು ಕಡೆಗಣಿಸಲಾಗದು. ಎಲ್ಲ ಒಳ್ಳೆಯ ಸಮಾಜಗಳ ನೆಲೆಗಟ್ಟು ಅದು.
-ರೋಹಿಣಿ ನಿಲೇಕಣಿ

ಗಂಡೋ ಹೆಣ್ಣೋ? ಹಾಸ್ಯ

ಗಂಡೋ ಹೆಣ್ಣೋ? ಹಾಸ್ಯ

ಕೊರೊನಾ ನಾಶಕ್ಕೆ ಶಕ್ತಿಯಂತ್ರ ಮಂತ್ರಿಸಿ ಕೊಡುವುದಾಗಿ ಗುರೂಜಿಯೊಬ್ಬರು ಜಾಹೀರಾತು ನೀಡಿದ್ದನ್ನು ನೋಡಿದ ತೆಪರೇಸಿ, ಅವರಿಗೆ ಫೋನ್ ಮಾಡಿದ. ‘ಗುರುಗಳೇ, ನೀವು ಕೊರೊನಾ ಬಂದೋರಿಗೆ ಯಂತ್ರ ಮಾಡಿ ಕೊಡ್ತೀರೋ ಅಥ್ವಾ ಅದು ಬರದಂಗೇ ಯಂತ್ರ ಮಾಡಿಕೊಡ್ತೀರೋ?’

‘ಎರಡಕ್ಕೂ ಮಾಡಿಕೊಡ್ತೀನಿ, ನಿಮಗೆ ಯಾವುದು ಬೇಕು?’

‘ಅಲ್ಲ, ಅದು ಮಹಾಮಾರಿ ವೈರಸ್ಸು, ನಿಮ್ಮ ಮಾತು ಕೇಳುತ್ತಾ ಅಂತ...’

‘ಎಂಥೆಂಥ ಭೂತ ಪ್ರೇತ ಪಿಶಾಚಿಗಳೆಲ್ಲ ನಮ್ಮ ಮಾತು ಕೇಳ್ತಾವೆ, ಜುಜುಬಿ ವೈರಸ್ ಕೇಳಲ್ವ?’

ಹೌದಾ? ಒಂದು ಪ್ರಶ್ನೆ ‘ಕೊರೊನಾ ಗಂಡೋ ಹೆಣ್ಣೋ?’ ಗುರೂಜಿ ತಡವರಿಸುತ್ತಾ ಕೇಳಿದರು ‘ಅದೆಲ್ಲ ಯಾಕೆ?’

‘ನೀವು ಯಂತ್ರ ಮಾಡಿಕೊಡುವಾಗ ಎಡವಟ್ಟಾಗಬಾರದು ನೋಡಿ. ಗಂಡು ಕೊರೊನಾಗೆ ಯಂತ್ರ ಮಾಡಿಕೊಡೋದು, ಆಮೇಲೆ ಹೆಣ್ಣು ಕೊರೊನಾ ಕಾಟ ಕೊಡೋದು ಮಾಡಿದ್ರೆ?’

‘ನನಗೆ ಗೊತ್ತಿಲ್ಲ, ನೀವೇ ಹೇಳಿ ನೋಡೋಣ’.

‘ನನ್ನ ಪ್ರಕಾರ ಕೊರೊನಾ ಹೆಣ್ಣು...’


‘ಹೆಣ್ಣಾ? ಅದೆಂಗೆ?’

‘ಕೊರೊನಾ ಸ್ತ್ರೀ ಪಕ್ಷಪಾತಿ, ಕೊರೊನಾದಿಂದ ಈಗ ಸತ್ತಿರೋರೆಲ್ಲ ಗಂಡಸರೇ’

‘ಆಯ್ತು, ಹೆಣ್ಣು ಕೊರೊನಾಗೆ ಮಂತ್ರಿಸಿ, ದಿಗ್ಬಂಧನ ಹಾಕಿ ನಿಮಗೆ ಗಟ್ಟಿಯಂತ್ರ ಮಾಡಿಕೊಟ್ರೆ ಆಯ್ತಲ್ಲ?’ ಗುರೂಜಿ ರಾಜಿಗೆ ಬಂದರು.

‘ಆಯ್ತು ಆದರೆ ಒಂದು ಕಂಡೀಶನ್. ನಿಮ್ಮ ಅಕೌಂಟಿಗೆ ನೀವು ಹೇಳಿದಷ್ಟು ಹಣ ಹಾಕ್ತೇನೆ. ನಿಮ್ಮಿಂದ ಒಂದು ಉಪಕಾರ ಆಗಬೇಕು...’

‘ಖಂಡಿತ ಮಾಡೋಣ ಹೇಳಿ’ ಗುರೂಜಿ ಖುಷಿಯಾದರು.

‘ಏನಿಲ್ಲ, ಯಂತ್ರ ಇಸ್ಕಳೋಕೆ ನಾನು ಹೊರಕ್ಕೆ
ಬಂದ್ರೆ ಪೊಲೀಸ್ರು ಒದೀತಾರೆ. ಹೆಂಗೂ ಕೊರೊನಾ ನಿಮಗೇನೂ ಮಾಡಲ್ಲ. ಒಂದು ಹೆಜ್ಜೆ
ನೀವೇ ನಿಮ್ಮ ಕಚೇರಿ ಪಕ್ಕಾನೇ ಇರೋ ಗೌರ್ಮೆಂಟ್ ಆಸ್ಪತ್ರೆ ಕೊರೊನಾ ವಾರ್ಡ್‌ಗೆ ಹೋಗಿ ನಮ್ಮ ಪೇಶಂಟ್ ಕೈಗೆ ಆ ಯಂತ್ರ ಕಟ್ಟಿ ಬರ್ತೀರಾ?
ಹಲೋ... ಹಲೋ...’ ಗುರೂಜಿ ಫೋನ್ ಕಟ್!
-ಬಿ.ಎನ್.ಮಲ್ಲೇಶ್

ನೋಡಿ ಸ್ವಾಮಿ ಮಾಲ್ಗುಡಿಯ ಆ ದಿನಗಳು

ನೋಡಿ ಸ್ವಾಮಿ ಮಾಲ್ಗುಡಿಯ ಆ ದಿನಗಳು


ನೋಡಿ ಸ್ವಾಮಿ ಮಾಲ್ಗುಡಿಯ ಆ ದಿನಗಳು


ಮಂಜುನಾಥ್ ನಾಯ್ಕರ್

ನೀವು ಮಾಲ್ಗುಡಿ ಡೇಸ್ ನೋಡಿದ್ದೀರಾದರೆ ನನ್ನ ಪರಿಚಯ ಇದ್ದೇ ಇರುತ್ತದೆ. ಹೌದು, ನಾನು ಮಾಸ್ಟರ್ ಮಂಜುನಾಥ್. ಆ ಕಾಲದ ಬಾಲ ಕಲಾವಿದ. ನನ್ನ ಮೂರನೇ ವರ್ಷದಲ್ಲಿ ಚಿತ್ರರಂಗದ ಜತೆ ನಂಟು ಶುರುವಾಯಿತು. ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದ ನನ್ನ ತಂದೆಯ ಸ್ನೇಹಿತರೊಬ್ಬರು ವಾಚಾಳಿ ಹುಡುಗನ ಪಾತ್ರಕ್ಕಾಗಿ ಹುಡುಕಾಟದಲ್ಲಿದ್ದರು. ನನಗದು ಅನಾಯಾಸವಾಗಿ ಒಲಿದು ಬಂತು. ಮಾಲ್ಗುಡಿ ಡೇಸ್‌ನ ಸ್ವಾಮಿ ಪಾತ್ರ ಹಾಗೂ ಅಗ್ನಿಪಥ್‌ನ ಅಮಿತಾಭ್ ಬಚ್ಚನ್ ಅವರ ಬಾಲ್ಯದ ಪಾತ್ರ ಮಾಡುವ ಹೊತ್ತಿಗಾಗಲೇ ನಾನು 23 ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದೆ. 

ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಸರಣಿ ಚಿತ್ರಗಳನ್ನು ತಯಾರಿಸಲು ನಿರ್ಧರಿಸಲಾಗಿತ್ತು. ಆಗ ಇದ್ದಿದ್ದು ದೂರದರ್ಶನ ಮಾತ್ರ. ದಕ್ಷಿಣ ಭಾರತದ ತಂಡಕ್ಕೆ ರಾಷ್ಟ್ರೀಯ ಸರಣಿಯೊಂದನ್ನು ನೀಡುವುದು ಹೇಗೆಂಬ ಅಳುಕೂ ಅವರಲ್ಲಿತ್ತು. ಆರ್‌.ಕೆ. ನಾರಾಯಣ್ ಹಾಗೂ ಶಂಕರ್‌ನಾಗ್ ಮೊದಲಾದವರ ನಿರಂತರ ಪರಿಶ್ರಮದ ಫಲವಾಗಿ ಕನ್ನಡಿಗರೇ ಕೂಡಿದ್ದ ತಂಡ ಇಡೀ ಸರಣಿಯಲ್ಲಿ ಕೆಲಸ ಮಾಡಿತು.  

ಅದು 1987ರ ಬೇಸಿಗೆ ಸಮಯ. ನೂರಕ್ಕೂ ಹೆಚ್ಚು ಕಲಾವಿದರು ಹಾಗೂ ತಂತ್ರಜ್ಞರಿದ್ದ ನಮ್ಮ ತಂಡ ಆಗುಂಬೆಯಲ್ಲಿ ಬೀಡುಬಿಟ್ಟಿತ್ತು. ಊರಿನ ಜನರಿಗಿಂತ ನಮ್ಮ ತಂಡದ ಸಂಖ್ಯೆಯೇ ಹೆಚ್ಚಿತ್ತು. ಆ ಊರು ಅಕ್ಷರಶಃ ನನ್ನ ಮನೆಯೇ ಆಗಿಹೋಗಿತ್ತು. ಬೆಳಗ್ಗೆ 5ಕ್ಕೆ ಎದ್ದು, ಅಂಬಾಸಿಡರ್ ಕಾರು ಏರಿ, 70 ಕಿಲೋಮೀಟರ್ ದೂರದಲ್ಲಿದ್ದ ಅರಸಾಳು ರೈಲ್ವೆ ನಿಲ್ದಾಣ ತಲುಪಬೇಕಿತ್ತು. ಅಲ್ಲಿಗೆ ಬರುತ್ತಿದ್ದುದು ಎರಡು ರೈಲು ಮಾತ್ರ. ಇಂತಹ ಪರಿಸ್ಥಿತಿಯಲ್ಲಿ ಚಿತ್ರೀಕರಣ ದುಸ್ತರವೇ ಸರಿ.  

ಅಸಾಧಾರಣ ದೂರದೃಷ್ಟಿ ಹೊಂದಿದ್ದ ಶಂಕರ್‌ನಾಗ್ ಅವರಿಗೆ ಅಸಾಧ್ಯ ಎಂಬುದೇ ಗೊತ್ತಿರಲಿಲ್ಲ. ಈಗ ಕ್ರೇನ್ ಶಾಟ್ ತೆಗೆಯುವ ರೀತಿಯಲ್ಲೇ, ಅಂದು ಅಡಿಕೆ ಮರಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿತ್ತು. ಪಕ್ಕದ ಮನೆಗಳಿಂದ ತೊಟ್ಟಿಲು ತಂದು, ಅದನ್ನು ಎರಡು ಅಡಿಕೆ ಮರಗಳ ಮಧ್ಯೆ ಕಟ್ಟಿ, ಅದರಲ್ಲಿ ಕ್ಯಾಮೆರಾಮನ್‌ ಕೂಡಿಸಿ ಚಿತ್ರೀಕರಿಸಿದ್ದು ಆಗಿನ ಕಾಲಕ್ಕೆ ಒಂದು ಸೋಜಿಗ. 

1987–90ರ ಅವಧಿಯಲ್ಲಿ ಮಾಲ್ಗುಡಿ ಡೇಸ್ 100ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಸಾರ ಕಂಡು, ಹತ್ತಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು. ವೈರುಧ್ಯವೆಂದರೆ, ಬ್ರಿಟಿಷ್ ವಿರೋಧಿ ಅಂಶಗಳಿದ್ದರೂ ಚಿತ್ರವು ಲಂಡನ್‌ನಲ್ಲಿ ಅತ್ಯುತ್ತಮ ಚಿತ್ರ ಎಂಬ ಗೌರವಕ್ಕೆ ಭಾಜನವಾಯಿತು. 

ಸರ್ಕಾರದ ಅನುಮತಿ ಪಡೆದು, ಶಾಲಾ ಹಾಜರಾತಿಯಿಂದ ವಿನಾಯಿತಿ ಪಡೆದೆ. ಬಳಿಕ ನನ್ನ ಅಭಿನಯ, ಬೇಸಿಗೆ ರಜೆಗೆ ಸೀಮಿತವಾಯಿತು. ಅತ್ಯುತ್ತಮ ಪಾತ್ರಗಳ ಕೊರತೆ ಹಾಗೂ ಶಿಕ್ಷಣದ ಕಡೆಗೆ ನಾನು ಗಮನಹರಿಸಬೇಕಾದ ಕಾರಣ ನನ್ನ 16ನೇ ವಯಸ್ಸಿನಲ್ಲಿ ನಟನೆಗೆ ಇತಿಶ್ರೀ ಹೇಳಿದೆ. 

ಸ್ನಾತಕೋತ್ತರ ಪದವಿ ಬಳಿಕ ಜಾಹೀರಾತು ಏಜೆನ್ಸಿ ಕಡೆ ಗಮನಕೊಟ್ಟೆ. 10 ಮತ್ತು 12ನೇ ತರಗತಿಯ ಫಲಿತಾಂಶವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸುವ ಆಲೋಚನೆಗೆ ಶ್ರೀಕಾರ ಹಾಕಿದೆ. ಭೂದಾಖಲೆಗಳ ಡಿಜಿಟಲೀಕರಣ ಮಾಡುವ ಭೂಮಿ ಪ್ರಾಜೆಕ್ಟ್‌ನಲ್ಲಿ ಹಾಗೂ ಬೆಂಗಳೂರು–ಮೈಸೂರು ಇನ್‌ಫ್ರಾ ಪ್ರಾಜೆಕ್ಟ್‌ನಲ್ಲಿ ಕೈಜೋಡಿಸಿದೆ. 

16 ವರ್ಷಗಳ ಬಣ್ಣದ ಹಾದಿಯಲ್ಲಿ 68 ಚಿತ್ರಗಳಲ್ಲಿ ನಟಿಸಿ, 6 ಅಂತರರಾಷ್ಟ್ರೀಯ ಪ್ರಶಸ್ತಿ, ತಲಾ ಒಂದು ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪಡೆದೆ. ಖುಷಿಯ ವಿಚಾರವೆಂದರೆ, ಈಗಲೂ ನನ್ನನ್ನು ಮಾಲ್ಗುಡಿಯ ಸ್ವಾಮಿ ಎಂದೇ ಜನ ಗುರುತಿಸುತ್ತಾರೆ.


Munjane mathu

Munjane mathu

ಲಾಕ್ ಡೌನ್ ಮುಗಿಯಬೇಕಾದರೆ ಏನು ಮಾಡಬೇಕು? ಡಾ. ಶಾಲಿನಿ ರಜನೀಶ್

ಲಾಕ್ ಡೌನ್ ಮುಗಿಯಬೇಕಾದರೆ  ಏನು ಮಾಡಬೇಕು? ಡಾ. ಶಾಲಿನಿ ರಜನೀಶ್


ಪರಿವರ್ತನೆಗಿದು ಸಕಾಲ |ಡಾ. ಗಿರಿದರ ಕೆ.ಜೆ

ಪರಿವರ್ತನೆಗಿದು ಸಕಾಲ |ಡಾ. ಗಿರಿದರ ಕೆ.ಜೆ

ಗಂಡಂದಿರ ಗುಟ್ಟು

ಗಂಡಂದಿರ ಗುಟ್ಟು



ಹೆಂಡ್ತಿಗೆ ಕೊಹ್ಲಿ ತಲೆ ಬಾಚಿದ್ದು, ರಾಧಿಕಾ ಪಂಡಿತ್ ಮನೆಕೆಲಸ ಮಾಡುವಾಗ ಯಶ್ ಮಕ್ಕಳನ್ನು ಆಟ ಆಡಿಸುವುದನ್ನು ಟಿ.ವಿ.ಯಲ್ಲಿ ತೋರಿಸಿದ್ರು, ನೀವು ನೋಡಲಿಲ್ವಾ?’

ಗಂಡಸರು ಮಾಸ್ಕ್ ಧರಿಸಿ, ಚೀಲ ಹಿಡಿದು ದಿನಸಿ ಅಂಗಡಿ ಎದುರು ಅಂತರ ಕಾಪಾಡಿಕೊಂಡು ಸಾಲುಗಟ್ಟಿದ್ದರು. ‘ಯಾಕೆ ಸಾರ್, ನಿಮ್ಮ ಸೊಂಟ ಹಿಡುಕೊಂಡಿದ್ದೀರಿ?’ ಒಬ್ಬರನ್ನು ಕೇಳಿದೆ.
‘ಮೆಡಿಕಲ್ ಸ್ಟೋರಿಗೆ ಹೋಗುತ್ತಿದ್ದಾಗ ಪೊಲೀಸರು ಬಾರಿಸಿಬಿಟ್ಟರು’ ಮುಲುಕಾಡಿದರು.
‘ಬರೆ ಬರುವಂತೆ ನಿಮ್ಮ ಕಾಲ ಮೇಲೆ ಬಾರಿಸಿದ್ದಾರೆ ಪೊಲೀಸರು, ಛೇ...’ ಇನ್ನೊಬ್ಬರಿಗೆ ಕೇಳಿದೆ. ಆತ ಗಾಬರಿಯಾಗಿ, ಮೇಲಕ್ಕೆ ಕಟ್ಟಿದ್ದ ಪಂಚೆಯನ್ನು ಕೆಳಕ್ಕೆ ಬಿಟ್ಟು ಮುಚ್ಚಿಕೊಂಡು, ‘ಹೆಹ್ಹೆಹ್ಹೆ... ಮೊನ್ನೆ ಫ್ರೆಂಡ್ ಮನೆಗೆ ಹೋಗಿಬರುವಾಗ ಪೊಲೀಸರು ಓಡಿಸಿಕೊಂಡು ಬಂದು ಹೊಡೆದರು’ ಎಂದು ಹೇಳಿ, ಸಾಮಾನು ಖರೀದಿಸಿ, ನಿಲ್ಲದೆ ಹೊರಟರು.
‘ಪಾಪ...! ಯಾಕೆ ಪೊಲೀಸರು ಗಂಡಸರನ್ನೇ ಹುಡುಕಿ ಲಾಠಿ ಬೀಸಿದ್ದಾರೆ?’ ಅಂಗಡಿಯವ
ನನ್ನು ಕೇಳಿದೆ. ‘ಲಾಠಿ ಏಟು ಅಲ್ಲ ಸಾರ್, ಸೌಟು, ಲಟ್ಟಣಿಗೆ ಏಟು. ಮುಖ-ಮೂತಿಯೂ ಊದಿಕೊಂಡಿದೆ, ಮಾಸ್ಕ್ ಹಾಕಿದ್ದರಿಂದ ನಿಮಗೆ ಕಾಣಿಸಿಲ್ಲ’ ಅಂದ.
‘ಪೊಲೀಸರು ಲಾಠಿ ಬಿಟ್ಟು ಸೌಟು, ಲಟ್ಟಣಿಗೆ ಹಿಡಿದು ಡ್ಯೂಟಿ ಮಾಡ್ತಾರಾ?’

‘ಶಿಲ್ಪಾ ಶೆಟ್ಟಿ ಕಸ ಗುಡಿಸಿದ್ದು, ಕತ್ರಿನಾ ಕೈಫ್ ಪಾತ್ರೆ ತೊಳೆದದ್ದು, ದೀಪಿಕಾ ಪಡುಕೋಣೆ ಅಡುಗೆ ಮಾಡುವಾಗ ಗಂಡ ತರಕಾರಿ ಹೆಚ್ಚಿಕೊಟ್ಟಿದ್ದು, ವಿರಾಟ್ ಕೊಹ್ಲಿಗೆ ಅನುಷ್ಕಾ ಹೇರ್ ಕಟಿಂಗ್ ಮಾಡಿದ್ದು, ಹೆಂಡ್ತಿಗೆ ಕೊಹ್ಲಿ ತಲೆ ಬಾಚಿದ್ದು, ರಾಧಿಕಾ ಪಂಡಿತ್ ಮನೆಕೆಲಸ ಮಾಡುವಾಗ ಯಶ್ ಮಕ್ಕಳನ್ನು ಆಟ ಆಡಿಸುವುದನ್ನು ಟಿ.ವಿ.ಯಲ್ಲಿ ತೋರಿಸಿದ್ರು, ನೀವು ನೋಡಲಿಲ್ವಾ?’
‘ನೋಡಿದೆ, ಸೆಲೆಬ್ರಿಟಿ ದಂಪತಿ ಕೊರೊನಾ ರಜೆಯಲ್ಲಿ ಒಬ್ಬರಿಗೊಬ್ಬರು ಹೆಲ್ಪ್ ಮಾಡಿಕೊಂಡಿದ್ದಾರೆ, ಆದರ್ಶ ದಂಪತಿ ಅವರು’.
‘ಹೌದಲ್ವಾ? ಅಂಥಾ ಸೆಲೆಬ್ರಿಟಿ ಗಂಡಂದಿರೇ ಹೆಂಡ್ತಿಯರಿಗೆ ಸಹಾಯ ಮಾಡುವಾಗ, ಈ ಗಂಡಂದಿರು ಮನೆಯಲ್ಲಿ ಬರೀ ಉಂಡುಕೊಂ ಡಿದ್ದರೆ ಯಾವ ಹೆಂಡ್ತಿ ತಾನೇ ಸಹಿಸಿಕೊಳ್ತಾಳೆ. ಸೌಟು, ಲಟ್ಟಣಿಗೆ ತಗೊಂಡು ಬ್ಯಾಟಿಂಗ್ ಆಡಿದ್ದಾರೆ. ಪೊಲೀಸರ ಲಾಠಿ ಏಟು ಅಂತ ಹೇಳಿಕೊಂಡು ಈ ಗಂಡಂದಿರು ಮರ್ಯಾದೆ ಕಾಪಾಡಿಕೊಳ್ತಿದ್ದಾರೆ ಅಷ್ಟೆ...’ ಎಂದು ಅಂಗಡಿಯವನು ನಕ್ಕ.
-ಮಣ್ಣೆ ರಾಜು

Munjane mathu

Munjane mathu

ಇನ್ನು ಹತ್ತಿರ ಹತ್ತಿರ ಬರುವೆಯಾ Innu hattira hattira baruveya





ಪೂರ್ಣ ಹಾಡನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

ಇನ್ನು ಹತ್ತಿರ ಹತ್ತಿರ ಬರುವೆಯಾ
ಚಿತ್ರ: ಭಾಗ್ಯದ ಲಕ್ಷ್ಮಿ ಬಾರಮ್ಮ
ರಚನೆ: ಚಿ. ಉದಯಶಂಕರ್
ಸಂಗೀತ: ಸಿಂಗೀತಂ ಶ್ರೀನಿವಾಸ ರಾವ್
ಗಾಯಕ/ನಾಟ: ಡಾ. ರಾಜಕುಮಾರ್, ಪಿ. ಸುಶೀಲ

ಗಂ:  ಇನ್ನು ಹತ್ತಿರ ಹತ್ತಿರ ಬರುವೆಯಾ ।೨।
        ಬಳಿ ನೀನು ಬಂದಾಗ ಕಣ್ಣೋಟ ಬೆರೆತಾಗ
        ಹೊಸ ಆಸೆ ನನ್ನೆದೆಯಲ್ಲಿ ಅರಳಿ ಅರಳಿ ಹೊಸತನವ ಕಂಡೆ
ಹೆ:   ಇನ್ನು ಹತ್ತಿರ ಹತ್ತಿರ ಬರುವೆಯಾ
        ಬಳಿ ನೀನು ಬಂದಾಗ ಕಣ್ಣೋಟ ಬೆರೆತಾಗ
        ಹೊಸ ಆಸೆ ನನ್ನೆದೆಯಲ್ಲಿ ಅರಳಿ ಅರಳಿ ಹೊಸತನವ ಕಂಡೆ

ಗಂ:  ಈ ಇರುಳಲೀ ಸುಲಿಯುವಾ ಗಾಳಿಗೆ, ಮೈ ಚಳಿಯಲಿ  ನಡುಗಿದೆ ಕಾಣದೆ
ಹೆ:    ಆ ಚಂದಿರಾ ಸುರಿಯುವಾ ಚಂದ್ರಿಕೆ, ಈ ಮನವನು ಕೆಣಕಿದೆ ಕಾಡಿದೆ
ಗಂ:   ಏಕಾಂತ ಬಂಡ ವೇಳೆ ಬಿಡು ಸಂಕೋಚವನ್ನು ನಲ್ಲೆ
ಹೆ:    ಈ ಮಾತು ಕೇಳಿದಾಗ ಮನ ಮೊಗ್ಗಾಗಿ ಹೊಯಿತಿಲ್ಲಿ
ಗಂ:   ಅರಿತೂ ಬೆರೆತೂ ಗೆಳತೀ ಹೊಸತನವ ಕಂಡೆ

ಜೊ:  ಇನ್ನು ಹತ್ತಿರ ಹತ್ತಿರ ಬರುವೆಯಾ

ಗಂ:  ಈ ಬಳುಕವಾ ನಡುವನು ನೋಡಲು, ಹೂ ಲತೆಗಳೂ ಕರಗುತಾ ನಾಚಲು
ಹೆ:    ಈ ಒಲವಿನಾ ಕವಿನುಡೀ ಕೇಳಲು, ಆ ಅರಗಿಣೀ ಮೌನದೀ ಒಡಲು
ಗಂ:  ಬಾಳೆಲ್ಲ ಹೀಗೆ ಸೇರಿ ನಲಿದಾಡೋಣವೆನ್ನ ಆಸೆ
ಹೆ:    ದಿನವೆಲ್ಲ ಹೀಗೆ ನಾವು ಸವಿಮಾತನ್ನು ಆಡುವಾಸೆ
ಗಂ:   ಮನವೂ ಕುಣಿದೂ ಗೆಳತೀ ಹೊಸತನವನು ಕಂಡೆ

ಹೆ:    ಇನ್ನು ಹತ್ತಿರ ಹತ್ತಿರ ಬರುವೆಯಾ
ಗಂ:   ಬಳಿ ನೀನು ಬಂದಾಗ ಕಣ್ಣೋಟ ಬೆರೆತಾಗ
ಜೊ:  ಹೊಸ ಆಸೆ ನನ್ನೆದೆಯಲ್ಲಿ ಅರಳಿ ಅರಳಿ ಹೊಸತನವ ಕಂಡೆ
         ಇನ್ನು ಹತ್ತಿರ ಹತ್ತಿರ ಬರುವೆಯಾ


Innu hattira hattira baruveya


Innu hattira hattira baruveya
Bali neenu bandaaga kannota beretaaga
Hosa aase nannedheyalli
Arali arali hosatanavanu kande
Innu hattira hattira baruveya
Bali neenu bandaaga kannota beretaaga
Hosa aase nannedheyalli
Arali arali hosatanavanu kande
Innu hattira hattira baruveya
Ee irulali suliyuva gaalige
Mai chaliyali nadugide kaanadhe
Aa chandira suriyuva chandrike
Ee manavanu kenakidhe kaadidhe
Ekanta banda vele
Bidu sankochavannu nalle
Ee maathu kelidaaga
Mana moggaagi hoyithille
Arithu berethu gelati hosatanavanu kande
Innu hattira hattira baruveya
Aaaaa Haaaa haaaaa
Aaaaaa, Haaa haaa haaa,
Isht bega magu aasena ninge? Aaaaa?
Thav na thav na nana
Thav na thav na nana
Aaaaa Aaaaaaaa
Ee balukuva naduvanu nodalu
Huv lathegalu soragutha naachalu
Ee olavina kavi nudi kelalu
Aa aragini mownadhi odalu
Baalella heege seri
Nalidhaadonavenno aase
Dinavella heege naavu
Savi maathannu aaduvaase
Manavu kunidu gelathi hosatanavanu kande
Innu hattira hattira baruveya
Bali neenu bandaaga
Kannota beretaaga
Hosa aase nannedheyalli
Arali arali hosatanavanu kande
Innu hattira hattira baruveya

ಇದು ಎಂಥಾ ಲೋಕವಯ್ಯಾ?

ಇದು ಎಂಥಾ ಲೋಕವಯ್ಯಾ?

ಮೆಹಂದಿ ಡಿಸೈನ್ ಕೂತಲ್ಲೆ ಕಲೆಕ್ಷನ್



ಕನ್ನಡ ಲೇಖನಗಳು




ಅಡುಗೆ ರುಚಿ


ಸಸ್ಯವಾಗುತ್ತೆ ಈ ಕೀಟ




ವಿಚ್ಛೇದನವಾದರೆ ಆಸ್ತಿ ಸಿಗುವುದಿಲ್ಲ


Zoom ಮಾಡಲು ಒಂದು click ಮಾಡಿ
ವಿಚ್ಛೇದನವಾದರೆ ಆಸ್ತಿ ಸಿಗುವುದಿಲ್ಲ

Pornography


Zoom ಮಾಡಲು ಒಂದು click ಮಾಡಿ

Pornography

ಸುಳ್ಳು ಸುದ್ದಿಗಳ ಮಾಯಾ ಜಾಲ... ನಂಬಿ ಮೋಸ ಹೋಗುತ್ತಿರುವ ಮಾಯಾ ಲೋಕ

ಸುಳ್ಳು ಸುದ್ದಿಗಳ ಮಾಯಾ ಜಾಲ...
ನಂಬಿ ಮೋಸ ಹೋಗುತ್ತಿರುವ ಮಾಯಾ ಲೋಕ


(1)
ಸುಳ್ಳು ಸುದ್ದಿ: ಮಂತ್ರಪಠಣದಿಂದ ಸೋಂಕು ನಿವಾರಣೆಯಾಗುತ್ತದೆ ಎಂಬ ಸುದ್ದಿಯೂ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದೆ. ‘ಕೊರೊನಾ ರಕ್ಷಾ ಕವಚ’ದ ಶ್ಲೋಕಗಳ ಪಠಣದ ಧ್ವನಿಮುದ್ರಿಕೆಯೊಂದು ಕೆಲವು ದಿನಗಳಿಂದ ಸದ್ದು ಮಾಡುತ್ತಿದೆ. ಶಿವಪುರಾಣದಲ್ಲಿ ಈ ಶ್ಲೋಕಗಳಿವೆ ಎಂಬ ಮಾಹಿತಿಯನ್ನು ಆ ವಿಡಿಯೊದ ಜತೆ ನೀಡಲಾಗಿದೆ. ‘ಚೀನಾ ದೇಶದಲ್ಲಿ ಹುಟ್ಟಿದ ಕೊರೊನಾ ಎಂಬ ವೈರಸ್‌, ಮಾಂಸಾಹಾರ ಸೇವನೆಯಿಂದಾಗಿ ಪ್ರಪಂಚದ ತುಂಬಾ ಹಬ್ಬುತ್ತಿದೆ. ಈ ವೈರಸ್‌ನಿಂದ ನಮ್ಮನ್ನು ಕಾಪಾಡು ಶಿವನೇ’ ಎನ್ನುವುದು ಶ್ಲೋಕಗಳ ಒಟ್ಟು ತಾತ್ಪರ್ಯವಾಗಿದೆ.


ಸತ್ಯಾಂಶ: ಶಿವಪುರಾಣದಲ್ಲಿ ಇಂತಹ ಶ್ಲೋಕ ಇಲ್ಲವೇ ಇಲ್ಲ ಎಂಬುದನ್ನು ಸಂಸ್ಕೃತ ವಿದ್ವಾಂಸರು ಖಚಿತಪಡಿಸಿದ್ದಾರೆ. ಈಗಿನ ಸಂದರ್ಭಕ್ಕೆ ಅನುಗುಣವಾಗಿ ಕೆಲವರು ಈ ಶ್ಲೋಕಗಳನ್ನು ರಚಿಸಿದ್ದು, ಸಂಕಷ್ಟದಿಂದ ಪಾರು ಮಾಡುವಂತೆ ದೇವರಿಗೆ ಮೊರೆ ಇಡಲಾಗಿದೆ ಅಷ್ಟೆ ಎಂದು ಅವರು ಹೇಳುತ್ತಾರೆ. ಆದರೆ, ಶ್ಲೋಕಗಳ ಪಠಣದಿಂದ ಸೋಂಕು ದೂರವಾಗದು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.


(2)
ಸುಳ್ಳು ಸುದ್ದಿ: ಗೋಮೂತ್ರ ಸೇವನೆಯಿಂದ ಕೊರೊನಾವೈರಸ್‌ ದೂರಮಾಡಬಹುದು, ಮನೆಯೊಳಗೆ ಸಗಣಿ ಮೇಲೆ ಲೋಬಾನ ಹಚ್ಚಬೇಕು. ‘ಓಂ ನಮಃ ಶಿವಾಯ’ ಅಥವಾ ಗಾಯತ್ರಿ ಮಂತ್ರವನ್ನು ಪಠಿಸುತ್ತಾ ಮನೆಯ ತುಂಬ ಲೋಬಾನದ ಹೊಗೆ ತುಂಬಿಸಿದರೆ ವೈರಸ್‌ ಸಾಯುತ್ತದೆ. ಪ್ರತಿನಿತ್ಯ ಹೋಮ–ಹವನ ಮಾಡುವುದರಿಂದ ವೈರಸ್‌ ಅನ್ನು ದೂರಮಾಡಬಹುದು ಎಂಬ ಸಂದೇಶವೂ
ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡಿದೆ.

ಸತ್ಯಾಂಶ: ಸೋಂಕು ನಿವಾರಕ ಸಿಂಪಡಣೆ ಮಾಡಿದಾಗ ಅದರ ಪ್ರಭಾವ ಇರುವಷ್ಟು ಸಮಯ ಮಾತ್ರ ಸೋಂಕಿನ ಭಯ ಇರಲಾರದು. ಮಿಕ್ಕ ಯಾವ ವಾದಗಳಿಗೂ ಆಧಾರವಿಲ್ಲ. ಅಂತಹ ಮಾಹಿತಿಯನ್ನು ನಂಬಿ ಅಪಾಯ ತಂದುಕೊಳ್ಳಬಾರದು ಎನ್ನುವುದು ವೈದ್ಯಲೋಕದ ಸಲಹೆಯಾಗಿದೆ.

(3)
ಸುಳ್ಳು ಸುದ್ದಿ: ನಾಸ್ಟ್ರಾಡಮಸ್‌ 1551ರಲ್ಲಿಯೇ ಬರೆದಿದ್ದ: ಅವಳಿ ಅಂಕಿಗಳ ವರ್ಷದಲ್ಲಿ (2020), ರಾಣಿಯೊಬ್ಬಳು ಅವತರಿಸಲಿದ್ದು (ಕೊರೊನಾ), ಅವಳು ಪೂರ್ವದಿಂದ ಬರುತ್ತಾಳೆ (ಚೀನಾ) ಮತ್ತು ಪ್ಲೇಗ್‌ (ವೈರಸ್‌) ಹರಡುತ್ತಾಳೆ. ಏಳು ಪರ್ವತಗಳ ದೇಶದಲ್ಲಿ (ಇಟಲಿ) ಕಗ್ಗತ್ತಲು ಕವಿದು, ಆ ಕ್ಷಣದಲ್ಲಿ ಜನ ಮಣ್ಣಾಗುತ್ತಾರೆ (ಸಾವು). ಇದರಿಂದ ಜಗತ್ತು ನಾಶವಾಗಲಿದೆ ಎಂದು. ಜಗತ್ತಿನ ಅರ್ಥವ್ಯವಸ್ಥೆ ನೆಲಕಚ್ಚಿರುವುದು ನಿಮ್ಮ ಕಣ್ಮುಂದೆ ಇದೆಯಲ್ಲವೇ ಎಂಬ ಬರಹ ಎಲ್ಲೆಡೆ ಹರಿದಾಡಿದೆ.

ಸತ್ಯಾಂಶ: ನಾಸ್ಟ್ರಾಡಮಸ್‌ ಕೃತಿಗಳಲ್ಲಿ ಇಂತಹ ಯಾವ ವಾಕ್ಯಗಳೂ ಪತ್ತೆಯಾಗಿಲ್ಲ. ಆತನ ಮೊದಲ ಕೃತಿ ಹೊರಬಂದಿದ್ದೇ 1555ರಲ್ಲಿ. ಆತ ಚೌಪದಿಗಳಲ್ಲಿ ಪದ್ಯಗಳನ್ನು ರಚನೆ ಮಾಡಿದ್ದ. ಆತನ ಬರವಣಿಗೆಗೆ ಈ ವಾಕ್ಯಗಳಲ್ಲಿ ಯಾವುದೇ ಸಾಮ್ಯತೆ ಇಲ್ಲ politiFact ವರದಿ ಮಾಡಿದೆ.
ಫೇಸ್‌ಬುಕ್‌ನಲ್ಲಿ ಬರುತ್ತಿರುವ ಮಾಹಿತಿಯ ಸತ್ಯಾಂಶದ ಪತ್ತೆಗೆ politiFact ಸಂಸ್ಥೆಯು ಫೇಸ್‌ಬುಕ್‌ಗೆ ನೆರವು ನೀಡುತ್ತಿದೆ. ಸಾಮಾಜಿಕ ಜಾಲತಾಣಗಳ ಇತ್ತೀಚಿನ ಪೋಸ್ಟ್‌ಗಳ ಹೊರಗೆ ಈ ಭವಿಷ್ಯವಾಣಿಯ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ ಎಂಬುದು ಪರಿಶೀಲನೆಯಲ್ಲಿ ಎದ್ದುಕಂಡಿದೆ. ಯಾವ ಮೂಲದಿಂದ ಈ ಮಾಹಿತಿಯನ್ನು ಪಡೆಯಲಾಯಿತು ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದೂ ತಿಳಿಸಲಾಗಿದೆ.

(4)
ಸುಳ್ಳು ಸುದ್ದಿ: ಏಪ್ರಿಲ್‌ ಮಧ್ಯಭಾಗದಿಂದ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬ ಸುದ್ದಿ ಹರಿದಾಡಿದೆ.

ಸತ್ಯಾಂಶ: ತುರ್ತು ಪರಿಸ್ಥಿತಿ ಘೋಷಿಸುವಂತಹ ಯಾವುದೇ ಚಿಂತನೆ ನಡೆದಿಲ್ಲ
ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಕಂಡು ಕಂಡುದನೆಲ್ಲವ ಕೊಂಡು
ಅಟ್ಟಹಾಸದಿ ಮೆರೆವ ಜನಕೆ
ಕಾಣದ ಜೀವಿಯು ಬಂದು
ತಲ್ಲಣಿಸುವುದು ಜಗವು ನೋಡಾ
ಗುಹೇಶ್ವರ

ಅಲ್ಲಮಪ್ರಭುಗಳು ಕೊರೊನಾವೈರಸ್‌ನ ಭವಿಷ್ಯ ನುಡಿದಿದ್ದರು ಎಂದು ಅವರ ವಚನವೊಂದು ಹರಿದಾಡುತ್ತಿದೆ

(5)
ಸುಳ್ಳು ಸುದ್ದಿ: ‘ಅತ್ರಿಣಾ ತ್ವಾ ಕ್ರಿಮೇ ಹನ್ಮಿ ಕಣ್ವೇನ ಜಮದಗ್ನಿನಾ...’ ಎಂಬ ಶ್ಲೋಕವೊಂದು ಹರಿದಾಡಿತ್ತು. ಈ ಶ್ಲೋಕವನ್ನು ಹೇಳಿದರೆ ಅದು ಎಬ್ಬಿಸುವ ತರಂಗಗಳಿಂದ ಕೊರೊನಾ ವೈರಸ್‌ನ ಪ್ರಭಾವ ತಗ್ಗಿ ಕೆಲವೇ ಕ್ಷಣಗಳಲ್ಲಿ ಅದು ನಿಷ್ಕ್ರಿಯವಾಗುತ್ತದೆ ಎಂದು ಹೇಳಲಾಗಿತ್ತು.

ಸತ್ಯಾಂಶ: ಇಂತಹ ಸುಳ್ಳು ಮಾಹಿತಿಯನ್ನು ಹರಿಬಿಡಬೇಡಿ ಎಂದು ನೆಟ್ಟಿಗರು ಶ್ಲೋಕ ಹಾಕಿದವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಹಾಗೊಂದು ವೇಳೆ ವೈರಸ್‌ ನಿಷ್ಕ್ರಿಯವಾಗುವುದೇ ನಿಜವಾದರೆ ಸೋಂಕುಪೀಡಿತರ ಬಳಿ ಕುಳಿತು ಪಠಿಸಿ ಎಂದು ಸಲಹೆಯನ್ನೂ ನೀಡಿದ್ದರು. ಬಳಿಕ ಈ ವಿಡಿಯೊ ನೇಪಥ್ಯಕ್ಕೆ ಸರಿದಿತ್ತು.

(6)
ಸುಳ್ಳು ಸುದ್ದಿ: ಮುಸ್ಲಿಂ ಸಮುದಾಯದ ಹಣ್ಣಿನ ವ್ಯಾಪಾರಿಯೊಬ್ಬರು, ಕೈಗಾಡಿ ಮೇಲೆ ಹಣ್ಣುಗಳನ್ನು ಜೋಡಿಸುವಾಗ ಬೆರಳಿನಿಂದ ಎಂಜಲು ಸವರಿಕೊಳ್ಳುವ ವಿಡಿಯೊ ವೈರಲ್ ಆಗಿದೆ.


ಸತ್ಯಾಂಶ: ಆ ಹಣ್ಣಿನ ವ್ಯಾಪಾರಿಯ ವಿಡಿಯೊವನ್ನು ಫೆಬ್ರುವರಿ ಎರಡನೇ ವಾರದಲ್ಲಿ ಚಿತ್ರೀಕರಿಸಲಾಗಿದೆ. ಹಣ್ಣಿಗೆ ಎಂಜಲು ಸವರುವ ಸಂಬಂಧ ಆತನ ಮೇಲೆ ಪ್ರಕರಣವೂ ದಾಖಲಾಗಿದ್ದು, ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಆತನನ್ನು ಕೊರೊನಾವೈರಸ್ ತಪಾಸಣೆಗೂ ಕಳುಹಿಸಲಾಗಿದೆ. ಆ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿಲ್ಲ ಎಂಬುದು ದೃಢಪಟ್ಟಿದೆ.

(7)
ಸುಳ್ಳು ಸುದ್ದಿ: ಮಧ್ಯಪ್ರದೇಶದ ರೇವಾ ಜಿಲ್ಲೆಯ ಅರ್ಚಕರೊಬ್ಬರಿಗೆ ದೇವಾಲಯದ ಎದುರೇ ಪೊಲೀಸ್ ಸಿಬ್ಬಂದಿಯೊಬ್ಬರು ಲಾಠಿಯಿಂದ ಹೊಡೆಯುತ್ತಿರುವ ಚಿತ್ರ ವೈರಲ್ ಆಗಿದೆ. ಪೊಲೀಸ್ ಸಿಬ್ಬಂದಿ ಮುಸ್ಲಿಂ, ಆತನ ಹೆಸರು ಅಬೀದ್ ಖಾನ್, ಆತ ರೇವಾ ಎಸ್‌.ಪಿ. ಎಂಬ ಸುದ್ದಿ ಹರಿದಾಡುತ್ತಿದೆ.

ಸತ್ಯಾಂಶ: ವಿಡಿಯೊದಲ್ಲಿರುವ ಮಾಹಿತಿ ಸುಳ್ಳು ಎಂದು ರೇವಾ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಲಾಕ್‌ಡೌನ್‌ ಹೊರತಾಗಿಯೂ ಅರ್ಚಕ ತನ್ನ ದೇವಾಲಯದ ಆವರಣದಲ್ಲಿ ಸಭೆ ನಡೆಸಲು ಅವಕಾಶ ನೀಡಿದ್ದ. ಇದನ್ನು ಪ್ರಶ್ನಿಸಿದ್ದ ಪೊಲೀಸರ ಮೇಲೆ ಕೂಗಾಡಿದ್ದ. ಆಗ ಪೊಲೀಸರು ಬಲಪ್ರಯೋಗಿಸಿದ್ದರು. ಅರ್ಚಕನ ಮೇಲೆ ಹಲ್ಲೆ ನಡೆಸಿದ ಸಿಬ್ಬಂದಿಯು ಇನ್‌ಸ್ಪೆಕ್ಟರ್‌ ಆಗಿದ್ದು, ಆತನ ಹೆಸು ರಾಜಕುಮಾರ್ ಮಿಶ್ರಾ ಎಂದು ಪೊಲೀಸರು ತಿಳಿಸಿದ್ದಾರೆ.

(8)
ಸುಳ್ಳು ಸುದ್ದಿ: ದೆಹಲಿಯ ನಿಜಾಮುದ್ದೀನ್‌ ದರ್ಗಾದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ವ್ಯಕ್ತಿಯೊಬ್ಬ ಊಟದ ಪಾರ್ಸಲ್‌ನಲ್ಲಿ ಉಗುಳುವ ದೃಶ್ಯವುಳ್ಳ ವಿಡಿಯೊ ಎಲ್ಲೆಡೆ ಹರಿದಾಡಿದೆ. ಹಾಗೆಯೇ ಮುಸ್ಲಿಮರು ಸಾಮೂಹಿಕವಾಗಿ ಸೀನುತ್ತಿರುವ ವಿಡಿಯೊ ಕೂಡ ಹರಿದಾಡಿದೆ.

ಸತ್ಯಾಂಶ: ಊಟದಲ್ಲಿ ವ್ಯಕ್ತಿ ಉಗುಳುವ ವಿಡಿಯೊ ಭಾರತದ್ದಲ್ಲ. 2019ರ ಏಪ್ರಿಲ್ 27ರಂದು ಯೂಟ್ಯೂಬ್‌ನಲ್ಲಿ ಇದನ್ನು ಪ್ರಕಟಿಸಲಾಗಿತ್ತು. ಚೀನಾದಲ್ಲಿ ಕೊರೊನಾ ಬಂದಿದ್ದೇ 2019ರ ನವೆಂಬರ್‌ನಲ್ಲಿ. ಸೀನುವ ದೃಶ್ಯವಿರುವ ವಿಡಿಯೊ ಪಾಕಿಸ್ತಾನದ್ದು. ವಾಸ್ತವವಾಗಿ ಅವರು ಸೀನುತ್ತಿಲ್ಲ. ಬದಲಾಗಿ ಜೋರಾಗಿ ಉಸಿರಾಡುತ್ತಿರುವ ನೋಟವದು. ಇದೊಂದು ಸೂಫಿ ಆಚರಣೆ. ಇದರ ಹೆಸರು 'ಜಿಕ್ರ್'. ಈ ವಿಡಿಯೊದಲ್ಲಿರುವುದು ನಿಜಾಮುದ್ದೀನ್ ದರ್ಗಾ ಅಲ್ಲ.

(9)
ಸುಳ್ಳು ಸುದ್ದಿ: ದೆಹಲಿಯ ನಿಜಾಮುದ್ದೀನ್‌ ದರ್ಗಾದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮುಸ್ಲಿಮರು ತಟ್ಟೆ ಮತ್ತು ಚಮಚ ನೆಕ್ಕುತ್ತಿರುವ ವಿಡಿಯೊ

ಸತ್ಯಾಂಶ: ಈ ವಿಡಿಯೊ ಭಾರತದ್ದು ಹಾಗೂ ಮೊದಲು ಪ್ರಕಟವಾಗಿದ್ದು 2018ರ ಜುಲೈ 30 2018ರಂದು. ದಾವೂದಿ ಬೋಹ್ರಾ ಪಂಗಡದವರಲ್ಲಿ ಒಂದು ಅಗಳು ಆಹಾರವನ್ನೂ ಬಿಡದೇ ನೆಕ್ಕುವ ಸಂಪ್ರದಾಯವಿದೆ. ಈ ವಿಡಿಯೊಗೂ ನಿಜಾಮುದ್ದೀನ್ ಮಸೀದಿಗೂ ಸಂಬಂಧವಿಲ್ಲ.

ಅಮ್ಮನಂತ ಪ್ರೀತಿ, ಅಮ್ಮನ ರೀತಿ Mother love

ಕನ್ನಡ ಕತೆಗಳು..

ಅವಳಿಗೆ ಅವನು ‘ಗ್ರೇಸಿ’ ಎಂದು ಹೆಸರಿಟ್ಟ. ಮನೆಗೆ ಕರೆತಂದವನೇ ಸ್ನಾನಮಾಡಿಸಿದ. ಅಂದಿನಿಂದ ಅವಳನ್ನು ತನ್ನೊಂದಿಗೆ ಮಲಗಿಸಿಕೊಳ್ಳಲು ಪ್ರಾರಂಭಿಸಿದ, ತಾಯಿಯ ಹಾಗೆ ಜೋಪಾನ ಮಾಡಿ ನೋಡಿಕೊಂಡ ದುರದೃಷ್ಟವಶಾತ್ ಅವಳ ಎಡಗಣ್ಣಿನ ಊತ ಉಲ್ಬಣಿಸಿ ಆ ಗಡ್ಡೆಯನ್ನು ತೆಗೆಯದೆ ಬೇರೆ ವಿಧಿಯೇ ಇರಲಿಲ್ಲ.

ನಟೋರಿಯಸ್ ಆಗಿದ್ದ ಅವನು ಸಂಪೂರ್ಣ ಬದಲಾದ ಕಾಲದಲ್ಲಿ ಸಮಾಜ ಸೇವೆಯತ್ತ ನನ್ನ ಚಿತ್ತ ಹೊರಳುವಂತೆ ಮಾಡಿದ್ದು ಹಾಲುಗಲ್ಲದ ಆ ಒಂದು ನಿಷ್ಕಲ್ಮಶ ನಗು. ಅದೊಂದು ದಿನ, ಅನಾಥ ಮಗುವೊಂದು ರಸ್ತೆಬದಿಯ ಚರಂಡಿಯಲ್ಲಿ ಬಿದ್ದಿದೆ ಎಂಬ ಸುದ್ದಿ ಅವನ ಪೇಜರ್‌ಗೆ ಬಂತು. ಅವಸರದಿಂದ ಬೈಕ್ ಏರಿ ಹೊರಟೇಬಿಟ್ಟೆ. ಅಲ್ಲಿ ಕಣ್ಣಿಗೆ ಬಿದ್ದದ್ದು ಒಂದು ಅನಾಥ ಹೆಣ್ಣುಮಗು. ಮಾಸಿದ, ಹರಿದ ಬಟ್ಟೆ ಅದರ ಮೇಲಿತ್ತು. ಅವಳ ಎಡಗಣ್ಣು ಎಷ್ಟರಮಟ್ಟಿಗೆ ಊದಿಕೊಂಡಿತ್ತೆಂದರೆ ರೆಪ್ಪೆಯನ್ನು ಮುಚ್ಚಲೂ ಆಗುತ್ತಿರಲಿಲ್ಲ. ಅವಳ ಚರ್ಮಕ್ಕೆಲ್ಲ ಸೋಂಕು ತಗುಲಿತ್ತು. ನೋವಿನಿಂದ ಮಗು ನರಳುತ್ತಿತ್ತು. ಅಲ್ಲಿ ಸೇರಿದ್ದ ಯಾರೊಬ್ಬರೂ ಸಹಾಯ ಮಾಡಲು ಮುಂದೆ ಬರಲಿಲ್ಲ. ಹಳೆಯದೊಂದು ಸೀರೆಯಲ್ಲಿ ಅವಳನ್ನು ಸುತ್ತಿ ಎದೆಗೆ ಕಟ್ಟಿಕೊಂಡು ಬೈಕ್ ಏರಿ ಹೊರಟೆ ಬಿಟ್ಟ.
ಸ್ವಲ್ಪ ಸಮಯದ ನಂತರ ಅವಳಿಂದ ಯಾವುದೇ ಧ್ವನಿ ಬಾರದಿದ್ದಾಗ ಗಾಡಿ ನಿಲ್ಲಿಸಿ ಸೀರೆಯ ಜೋಳಿಗೆಯೊಳಗೆ ಇಣುಕಿ ನೋಡಿದಾಗ ಅವನಿಗೆ ಅಚ್ಚರಿ ಕಾದಿತ್ತು. ಅವಳ ಬೊಚ್ಚು ಬಾಯಿಯಲ್ಲಿ ನಿಷ್ಕಲ್ಮಶ ನಗು. ಅದನ್ನು ಕಂಡಾಗ ಅವನಿಗೂ ಈ ಹಸುಳೆಗೂ ಯಾವಜನ್ಮದ ನಂಟೋ ಎಂದೆನಿಸದೇ ಇರಲಿಲ್ಲ. ಅವಳಿಗೆ ಅವನು ‘ಗ್ರೇಸಿ’ ಎಂದು ಹೆಸರಿಟ್ಟ. ಮನೆಗೆ ಕರೆತಂದವನೇ ಸ್ನಾನಮಾಡಿಸಿದ. ಅಂದಿನಿಂದ ಅವಳನ್ನು ತನ್ನೊಂದಿಗೆ ಮಲಗಿಸಿಕೊಳ್ಳಲು ಪ್ರಾರಂಭಿಸಿದ, ತಾಯಿಯ ಹಾಗೆ ಜೋಪಾನ ಮಾಡಿ ನೋಡಿಕೊಂಡ ದುರದೃಷ್ಟವಶಾತ್ ಅವಳ ಎಡಗಣ್ಣಿನ ಊತ ಉಲ್ಬಣಿಸಿ ಆ ಗಡ್ಡೆಯನ್ನು ತೆಗೆಯದೆ ಬೇರೆ ವಿಧಿಯೇ ಇರಲಿಲ್ಲ. ಮತ್ತೊಂದು ಕಣ್ಣಿನ ದೃಷ್ಟಿಯೂ ಅರ್ಧಕ್ಕೆ ಸೀಮಿತಗೊಂಡಿತು. ಅವಳ ಕುಟುಂಬವನ್ನು ಪತ್ತೆಹಚ್ಚಲು ಮಾಡಿದ ಯತ್ನಗಳೂ ಫಲ ನೀಡಲಿಲ್ಲ. ಆ ಸಮಯದಲ್ಲಿ ತನ್ನಲ್ಲಿ ಹಣದ ಕೊರತೆ ಇತ್ತಾದರೂ, ಆಕೆಯನ್ನು ಬಿಟ್ಟುಕೊಡಲು ಅವನು ಸಿದ್ಧನಿರಲಿಲ್ಲ.
ಅವನಿಗೆ ಅದಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಅವನ ಹೆಂಡತಿ ಗ್ರೇಸಿಯ ಸನಿಹಕ್ಕೂ ಹೋಗುತ್ತಿರಲಿಲ್ಲ. ಮೇಲಾಗಿ ಗಂಭೀರ ಆರೋಪವೊಂದನ್ನೂ ಹೊರಿಸಿದ್ದಳು. ನಿನ್ನ ಅಕ್ರಮ ಸಂಬಂಧದಿಂದ ಆ ಮಗು ಹುಟ್ಟಿದೆ ಎಂಬುದು ಆಕೆಯ ದೂರು. ಈ ಕಾರಣವಾಗಿ ಮನೆಯಲ್ಲಿ ರಂಪಾಟವೇ ನಡೆದರೂ,  ಗ್ರೇಸಿಯನ್ನು ತ್ಯಜಿಸಲಿಲ್ಲ. ದಿನಗಳೆದಂತೆ ಗ್ರೇಸಿ ಮೋಡಿಗೆ ಆಕೆ ಒಳಗಾದಳು. ಈಗ, ಇಬ್ಬರೂ ಒಳ್ಳೆಯ ಗೆಳತಿಯ
ರಾಗಿದ್ದಾರೆ. ಎಲ್ಲ ಮಕ್ಕಳಂತೆ ಆಕೆಯ ಮೊದಲ ನುಡಿ ‘ಅಮ್ಮ’ ಆಗಿರಲಿಲ್ಲ. ಆಕೆ ಹೇಳಿದ್ದೇ ‘ದಾದಾ’ ಎಂದು. 
ತಮಗಿಂತ ಗ್ರೇಸಿ ಬಗೆಗೇ ಹೆಚ್ಚು ಪ್ರೀತಿ ಎಂಬುದು ಅವನ ಮಕ್ಕಳ ಆರೋಪ. ನನ್ನ ಮಕ್ಕಳಿಗೆ ಅಮ್ಮ ಇದ್ದಳು. ಆದರೆ ಗ್ರೇಸಿಗೆ ಇದ್ದಿದ್ದು ನಾನು ಮಾತ್ರ. ಎಲ್ಲ ತಂದೆಯರಂತೆ ಆಕೆಯ ಭವಿಷ್ಯದ ಬಗ್ಗೆ ನನಗೆ ಚಿಂತೆಯಿತ್ತು. ಕನ್ನಡ ಮಾಧ್ಯಮದಲ್ಲಿ 9ನೇ ತರಗತಿವರೆಗೆ ಓದಿದ ಆಕೆ ಈಗ ನನ್ನದೇ ಎನ್‌ಜಿಒನಲ್ಲಿ 60 ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾಳೆ. ತುಂಟ ಹುಡುಗಿಯಾದರೂ ಸೂಕ್ಷ್ಮ ಮನಸ್ಸಿನವಳು. ಈ ಹಂತಕ್ಕೆ ಬೆಳೆದಿದ್ದರ ಬಗ್ಗೆ ನನಗೆ ಹೆಮ್ಮೆಯಿದೆ. ಆಕೆ ಇಲ್ಲದ ಬದುಕನ್ನು ಕಲ್ಪಿಸಿಕೊಳ್ಳುವುದು ನನಗೆ ಕಷ್ಟ.

ಕಾನೂನು ರೀತಿ ಆಕೆಯನ್ನು ನಾನು ದತ್ತು ಪಡೆದಿಲ್ಲ. ಆದರೆ ಪ್ರೀತಿಗೆ ಕಾಗಗದ ಪುರಾವೆ ಅಗತ್ಯವಿಲ್ಲ, ಡಿಎನ್‌ಎಯ ನಂಟೂ ಬೇಕಿಲ್ಲ. ಅಲ್ಲವೇ...

Munjane mathu

Munjane mathu

ಕವನ Kavana

1)
ಮಳೆ ನಿಂತರೂ
ಎಲೆಯ ಮೇಲಿನ
ಹನಿ ಜಾರಲಿಲ್ಲ.
ಅಪರೂಪಕೆ ಭೇಟಿಯಾದ
ನೆನಪಿನ ಸ್ನೇಹ ಇರಬೇಕೆನೊ? Prasad..

2)
ಎಂದೊ ಶುರುವಾದ ಧಾರಾವಾಹಿಗಳು
ಪೂರ್ಣ ಮುಗಿದಿಲ್ಲವಾದರೂ
ಸದ್ಯ ..ತೆರೆ ಎಳೆಯುವ ಸಂಭವ ಬಂದಿದೆ.
ಕಂಡಕಂಡವರ ಮನೆ ಕತೆ ಹೇಳುತ್ತಿದ್ದ ಕಾಲ
ಹೇಳದ ಕೇಳದೆ ಹೋರಟು ಹೋಗಿದೆ.
ಬದಲಾಗುತ್ತಿರುವ ಇಂದಿನ ಕಾಲ ಘಟ್ಟದಲಿ
ಧಾರವಾಹಿ ಕತೆಗಳು ಬಾಯಿ ಮಾತಾಗಿ ಹೊರ ಬರುತಿದೆ
ಅಂದಿದ್ದ ಕಾಲವು ಇಂದಿಲ್ಲವಾದರು
ಕೊರೊನಾದಿಂದಾಗಿ ಮತ್ತೆ ಪುನ್ಹ ಬಂದಂತಿದೆ.Prasad..😊

Kannada Kavana


Kannada Kavana

ಮೈ ನೆನೆಯುತ್ತಿದ್ದರೂ....ಕಾಲು ತುಸು ಒದ್ದೆಯಾಯಿತ್ತಲ್ಲ ಅನ್ನೊ ಈ ಹುಡುಗಿಯ ಚಿಂತೆ. ಯಾರಿಗೊತ್ತು? ಆ ಮೊದಲ ಮಳೆ ಹನಿಗು ಸಂಭ್ರಮ ಒಂದು ಹೆಣ್ಣಿನ ಪಾದ ಸ್ಪರ್ಶಿಸಲು. Prasad..😘

ಕನ್ನಡ ಕವನಗಳು (ಕವಿತೆ ಮಾಸ್ಟರ್)

(  ಛತ್ರಿ 1)
-----------------
 ನಿನ್ನ ನೆನಪು
ಮತ್ತೆ ಶುರುವಾಗುತಿದೆ
ಎಂದೊ ಬದಿಗೆತ್ತಿ
ಇಟ್ಟ ನೆನಪು
ಮತ್ತೆ ಕಾಡತೊಡಗಿದೆ
ಬಿರು ಬಿಸಿಲಲು
ಬಿಡಿಸಿ ನೋಡದ
ನಿನ್ನ  ಮುಖವನು
ಇಂದು ತೆರೆದು
ನೋಡುವ ಹಾಗೆ ಮಾಡಿದೆ|

(  ಛತ್ರಿ 2)
-----------------
  ಅಂದೊಂದು
ಮೋಡದ ಮರೆಯಿಂದ
ಜಾರಿದ ಮಳೆ ಹನಿ
ನನ್ನ ಮೈ ಸೋಕಿದಾಗ
ನಿನ್ನನ್ನು ಬಿಟ್ಟು ಬಂದೆನಲ್ಲ
ಎಂಬ ಕೊರಗು ಕಾಡಿತು| 

(ಕೊಡೆ ಹಿಡಿಯುವ ಜೊತೆಗಾತಿ)
------------------------------------
  ನೀ ನು  ಇದ್ದರೆ ನನ್ನ ಕಾಯುತ್ತಿದ್ದೆ
ಇರಬೇಕು ನೀನು ನನ್ನ ಜೊತೆ
ಮಳೆಗಾಲದಲಿ ನನ್ನ ಬಿಟ್ಟು ಇರಲಾರದಂತೆ|

(ಬಾಲ್ಯದ ಮಳೆ)
----------------------
ಅದೊಂದು ನೀರಾಟ ಮಳೆ ಸೋಕುವ ಭಯವು ಇರಲಿಲ್ಲ. ಆವಾಗ ನನಗೆ ನಾನೆ ರಾಜ, ನನಗೆ ನಾನೆ ರಕ್ಷಕ.Prasad....

Munjane mathu

Munjane mathu

Kannada kavanagalu

Kannada kavanagalu

Kannada kavanagalu

Kannada kavanagalu

Who should wear the mask? ಮಾಸ್ಕ್‌ ಯಾರೆಲ್ಲ ಧರಿಸಬೇಕು?

 ಮಾಸ್ಕ್‌ ಯಾರೆಲ್ಲ ಧರಿಸಬೇಕು? ಹಾಗು ಮಾಸ್ಕ್  ಶುಧ್ದತೆಯಿಂದ ಕಾಪಾಡಿಕೊಳ್ಳುವುದು ಹೇಗೆ?

Who should wear the mask? ಮಾಸ್ಕ್‌ ಯಾರೆಲ್ಲ ಧರಿಸಬೇಕು?

ಯಾರು ಧರಿಸಬೇಕು?
ಆರೋಗ್ಯ ಸಮಸ್ಯೆ ಅಥವಾ ಉಸಿರಾಟದ ತೊಂದರೆ ಇಲ್ಲದ ಜನರು ಮನೆಯಲ್ಲಿ ತಯಾರಿಸಿದ ಮಾಸ್ಕ್‌ಗಳನ್ನು ಧರಿಸಬಹುದು 
ಇಂತಹ ಮಾಸ್ಕ್‌ಗಳು ಆರೋಗ್ಯ ಕಾರ್ಯಕರ್ತರು, ಕೋವಿಡ್‌ ರೋಗಿಗಳು ಮತ್ತು ರೋಗಿಗಳ ಜತೆಗೆ ಸಂಪರ್ಕದಲ್ಲಿ ಇರುವವರ ಬಳಕೆಗೆ ಅಲ್ಲ. ಅಂಥವರು ನಿರ್ದಿಷ್ಟವಾಗಿ ಶಿಫಾರಸು ಮಾಡಿದ ಮಾಸ್ಕ್‌ಗಳನ್ನೇ ಬಳಸಬೇಕು
ಮನೆಯಲ್ಲಿ ಮಾಸ್ಕ್‌ ತಯಾರಿಸಿಕೊಳ್ಳುವವರು ಕನಿಷ್ಠ ಎರಡು ಮಾಸ್ಕ್‌ಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಒಂದನ್ನು ಒಗೆದು ಹಾಕಿದಾಗ ಇನ್ನೊಂದನ್ನು ಬಳಸಬಹುದು
ಮಾಸ್ಕ್‌ ತಯಾರಿಸಲು ಮನೆಯಲ್ಲಿ ಇರುವ ಶೇ ನೂರರಷ್ಟು ಹತ್ತಿಯ ಬಟ್ಟೆಗಳನ್ನು ಬಳಸಬೇಕು. ಮಾಸ್ಕ್‌ ತಯಾರಿಸುವ ಮುನ್ನ ಬಟ್ಟೆಯನ್ನು ಕುದಿಯುವ ನೀರಿನಲ್ಲಿ ಐದು ನಿಮಿಷ ಸ್ವಚ್ಛವಾಗಿ ತೊಳೆದು ಸರಿಯಾಗಿ ಒಣಗಿಸಿಕೊಳ್ಳಬೇಕು 
ಮನೆಯಲ್ಲಿರುವ ಎಲ್ಲರಿಗೂ ಪ್ರತ್ಯೇಕವಾದ ಮಾಸ್ಕ್‌ ತಯಾರಿಸಿಕೊಳ್ಳಬೇಕು. ಯಾವ ಕಾರಣಕ್ಕೂ ಒಬ್ಬರ ಮಾಸ್ಕನ್ನು ಇನ್ನೊಬ್ಬರು ಬಳಸಬಾರದು.
ಒಂದು ಬಾರಿ ಬಳಸಿದ ಮಾಸ್ಕ್‌ ಅನ್ನು ತೊಳೆಯದೆ ಮತ್ತೊಮ್ಮೆ ಬಳಸಲೇಬೇಡಿ. ಮಾಸ್ಕ್‌ ತೇವವಾದ ತಕ್ಷಣ ಅದನ್ನು ಬದಲಾಯಿಸಿ
ಮಾಸ್ಕ್‌ ಬಳಸುವ ಮುನ್ನ ಸಾಬೂನು ಹಾಕಿ ಕೈ ತೊಳೆದುಕೊಳ್ಳಬೇಕು
ಸ್ವಚ್ಛ ಮಾಡುವುದು ಹೇಗೆ?
ಬಳಕೆಯ ನಂತರ ಮಾಸ್ಕ್‌ ಅನ್ನು ಸಾಬೂನು ಮತ್ತು ಬಿಸಿ ನೀರಿನಲ್ಲಿ ತೊಳೆಯಬೇಕು. ಸೂರ್ಯನ ಬೆಳಕಿನಲ್ಲಿ ಕನಿಷ್ಠ ಐದು ಗಂಟೆ ಒಣಗಿಸಬೇಕು
ಸೂರ್ಯನ ಬೆಳಕು ಇಲ್ಲ ಎಂದಾದಲ್ಲಿ, ಪ್ರೆಷರ್‌ ಕುಕ್ಕರ್‌ನಲ್ಲಿ ನೀರಿನೊಂದಿಗೆ ಹಾಕಿ ಹತ್ತು ನಿಮಿಷ ಕುದಿಸಬೇಕು. ನೀರಿಗೆ ಉಪ್ಪು ಹಾಕುವುದು ಉತ್ತಮ. ಕುಕ್ಕರ್ ಕೂಡ ಇಲ್ಲದಿದ್ದರೆ, ನೀರಿಗೆ ಹಾಕಿ 15 ನಿಮಿಷ ಕುದಿಸಿದರೂ ಸಾಕು, ಅಥವಾ
ತೊಳೆದ ಬಳಿಕ ಐದು ನಿಮಿಷ ಬಿಸಿಗೆ ಒಡ್ಡಬೇಕು. ಇದಕ್ಕಾಗಿ ಇಸ್ತ್ರಿ ಪೆಟ್ಟಿಗೆ ಬಳಸಬಹುದು. 

Munjane mathu

Munjane mathu

Featured Post

ನಿದ್ದೆ ಎಂಬ ಮದ್ದು

ನಿದ್ದೆ ಎಂಬ ಮದ್ದು ‘ಹಗಲು ಎಚ್ಚರ, ರಾತ್ರಿ ಗಡದ್ದಾಗಿ ನಿದ್ದೆ ಮಾಡಿದರೆ ಕೊರೊನಾ ಸದ್ದಿರೋಲ್ವಂತೆ’ ಸುದ್ದಿಸಾರ ಹೇಳಿದೆ. ‘ಹಾಳಾದ್ದು, ಮಧ್ಯಾಹ್ನ ನಿದ್ದೆ ತಡೆಯ...

Popular Post