ಅರಳಿ ಮರದ ಧಾರ್ಮಿಕ ಮಹತ್ವ
ಬನ್ನಿ ಅದೇನು ಎಂಬುದನ್ನ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಅರಳಿ ಮರವು ಭಾರತದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ, ವಿಶೇಷವಾಗಿ ಬೌದ್ಧರಲ್ಲಿ ಅರಳಿ ಮರವನ್ನು ಬುದ್ಧ ಎಂದು ಪರಿಗಣಿಸಲಾಗುತ್ತದೆ.
ಭಗವಾನ್ ಬುದ್ಧನು ಅರಳಿ ಮರದ ಕೆಳಗೆ ಜ್ಞಾನೋದಯವನ್ನು ಪಡೆಯುತ್ತಾನೆ ಅದರಿಂದ ಇದನ್ನು ಭೌಧ ಧರ್ಮದಲ್ಲಿ ಪವಿತ್ರ ಮರವೆಂದು ಪರಿಗಣಿಸಲಾಗುತ್ತದೆ.
ಜನರು ಈ ಮರದ ಎಲೆಗಳನ್ನು ಧಾರ್ಮಿಕ ಉದ್ದೇಶಗಳಿಗೂ ಕೂಡ ಬಳಸುತ್ತಾರೆ.
ಭಾರತದಲ್ಲಿ ಹಿಂದೂಗಳಿಗೆ ಅರಳಿ ಮರದ ಬಗ್ಗೆ ಒಂದು ವಿಶಿಷ್ಟ ಗೌರವವಿದೆ, ಇದನ್ನು ಹಿಂದುಗಳು ವಿಷ್ಣು ಜನಿಸಿದ ಮರವೆಂದು ಪರಿಗಣಿಸುತ್ತಾರೆ.
ಬೌದ್ಧಧರ್ಮ, ಹಿಂದೂ ಧರ್ಮ ಮತ್ತು ಜೈನ ಧರ್ಮಗಳಲ್ಲಿ ಅರಳಿ ಮರವನ್ನು ಪವಿತ್ರ ಧಾರ್ಮಿಕ ರೂಪವಾಗಿ ಪೂಜಿಸಲಾಗುತ್ತದೆ.
ಹಿಂದೂ ಅಥರ್ವವೇದದಲ್ಲಿ, ಅರಳಿ ಮರವನ್ನು ದೇವರುಗಳ ವಾಸಸ್ಥಾನ ಎಂದು ವಿವರಿಸಲಾಗಿದೆ.
ಈ ಮರವು ಸಾಮಾನ್ಯವಾಗಿ 10 ರಿಂದ 10 ಮೀಟರ್ (33 ಅಡಿ) ಉದ್ದ ಮತ್ತು 200 ರಿಂದ 300 ಸೆಂ.ಮೀ ಗಿಂತ ಹೆಚ್ಚು ದಪ್ಪವಾಗಿರುತ್ತದೆ.
ಇದು ಆಳವಿಲ್ಲದ ಮಣ್ಣು, ಬಂಡೆಯ ಬಿರುಕುಗಳು, ಮೆಕ್ಕಲು ಮರಳು , ಕಪ್ಪು- ಕೆಂಪು ಮಣ್ಣಿನಲ್ಲಿ ಕಂಡುಬರುತ್ತದೆ.
ಅರಳಿ ಮರವು ತುಂಬಾ ದಟ್ಟವಾಗಿ ದೊಡ್ಡ ರೂಪದಲ್ಲಿ ಬೆಳೆದು ಮಾಲಿನ್ಯ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಏಕೆಂದರೆ ಇದು ಇಂಗಾಲವನ್ನು ದೊಡ್ಡ ಪ್ರಮಾಣದಲ್ಲಿ ಹೀರಿಕೊಂಡು, ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.SHAYILAinfo